filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 44;

ಚಳ್ಳಕೆರೆ : ತಾಲೂಕಿನಲ್ಲಿ ಇರುವ ಪ್ರತಿಯೊಂದು ಸಮುದಾಯಕ್ಕೂ ಆಶ್ರಯ ಯೋಜನೆಯಲ್ಲಿ ನಿವೇಶನ ಹಾಗೂ ಸಮುದಾಯದ ಕಾರ್ಯ ಚಟುವಟಿಕೆಗಳಿಗೆ ಸಾರ್ವಜನಿಕ ಉದ್ದೇಶಕ್ಕೆ ಮೀಸಲಾಗಿರುವಂತಹ ನಿವೇಶನಗಳನ್ನು ನೀಡಲು ಸ್ಥಳೀಯ ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ಸೂಚನೆ ಮೇರೆಗೆ ಎಲ್ಲಾ ಸಮುದಾಯಗಳಿಗೂ ಸಿಎ.ನಿವೇಶನಗಳನ್ನು ಮೀಸಲಿಡಲು ತಮ್ಮ ಮನವಿಗಳನ್ನು ಸ್ವೀಕರಿಸಲಾಗುತ್ತದೆ ಎಂದು ತಹಶಿಲ್ದಾರ್ ರೇಹಾನ್ ಪಾಷ ಹೇಳಿದರು.

ಅವರು ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕಿನ ವಿವಿಧ ಸಮುದಾಯಗಳ ಮುಖಂಡರಗಳೊಂದಿಗೆ ಆಯೋಜಿಸಿದಂತಹ ಸಭೆಯಲ್ಲಿ ಮಾತನಾಡಿದರು, ಸಾರ್ವಜನಿಕರಿಗೆ ಅಗತ್ಯವಾದಂತಹ ಸ್ಮಶಾನ ಹಾಗೂ ನಿವೇಶನ, ಧಾರ್ಮಿಕ ಕಾರ್ಯ ಚಟುವಟಿಕೆಗಳಿಗೆ ಅಗತ್ಯವಾಗಿರುವಂತಹ ಸಾರ್ವಜನಿಕ ಉದ್ದೇಶಕ್ಕೆ ಮೀಸಲಾಗಿರುವಂತಹ ನಿವೇಶನಗಳನ್ನು ಹಂಚಿಕೆ ಮಾಡಲು, ಅರ್ಜಿ ಸ್ವೀಕರಿಸಲಾಗುತ್ತದೆ, ಹೀಗೆ ಎಲ್ಲಾ ವರ್ಗಕ್ಕೂ ಎಲ್ಲ ಹಂತದ ಜನರಿಗೆ ಸರ್ಕಾರದ ಸೌಲಭ್ಯವನ್ನು ದೊರಕಿಸಿ ಕೊಡುವಂತದ್ದು ನಮ್ಮ ಹಾದ್ಯ ಕರ್ತವ್ಯ ಆದ್ದರಿಂದ ಪ್ರತಿ ಬಾರಿಯೂ ಜಯಂತಿ ಕಾರ್ಯಕ್ರಮಗಳಲ್ಲಿ ನಿವೇಶನ ಹಾಗೂ ಭೂಮಿ ಕೇಳುವಂತಹ ಸಾಂದರ್ಭಿಕ ಮಾತುಗಳು ಕೇಳಿಬರುತ್ತಿವೆ, ಆದ್ದರಿಂದ ಸ್ಥಳೀಯ ಕ್ಷೇತ್ರದ ಶಾಸಕ ಟಿ ರಘುಮೂರ್ತಿ ಅವರ ಸೂಚನೆ ಹಾಗೂ ಸರ್ಕಾರದ ಜಿಲ್ಲಾಧಿಕಾರಿಗಳು ಹಾಗೂ ತಾಲೂಕಿನ ಸಾರ್ವಜನಿಕರ ಹಿತದೃಷ್ಟಿಯಿಂದ ನಿವೇಶನ ನೀಡುವಂತಹ ಮಹತ್ವದ ಕಾರ್ಯ ನಡೆಯುತ್ತದೆ, ಆದ್ದರಿಂದ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರ ಉದ್ದೇಶಕ್ಕೆ ಭೂಮಿ, ನಿವೇಶನಕ್ಕಾಗಿ ತಾಲೂಕು ಆಡಳಿತಕ್ಕೆ ಅರ್ಜಿ ಸಲ್ಲಿಸಿದ್ದಲ್ಲಿ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ತಾಲೂಕು ಹಂತದಲ್ಲಿ ಹಾಗೂ ಸರ್ಕಾರದ ಮಟ್ಟದಲ್ಲಿ ಅರ್ಜಿಯ ಆಧಾರದ ಮೇಲೆ ನಿವೇಶನ ಹಾಗೂ ಭೂಮಿ ನೀಡಲಾಗುವುದು ಎಂದು ಹೇಳಿದರು.

ಇನ್ನು ಇದೇ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಎಚ್ ಶಶಿಧರ್ ಮಾತನಾಡಿ, ತಾಲೂಕಿನಲ್ಲಿ ಸುಮಾರು 40 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಎಲ್ಲಾ ಗ್ರಾಮಗಳಲ್ಲಿ ಸಾರ್ವಜನಿಕರ ಉದ್ದೇಶಕ್ಕೆ ಸ್ಮಶಾನ ಭೂಮಿ ನಿಗಧಿ ಮಾಡಲಾಗಿದೆ, ಹಾಗೂ ಆಶ್ರಯ ಯೋಜನೆಯಲ್ಲಿ ನಿವೇಶನ ನೀಡಲಾಗುತ್ತಿದೆ ಅದರಂತೆ ಈಗಾಗಲೇ ಸುಮಾರು ಹಳ್ಳಿಗಳಲ್ಲಿ ಸ್ಮಶಾನ ಮುಕ್ತ ಗ್ರಾಮ ಮಾಡಿದ್ದೇವೆ ಇನ್ನು ಅಗತ್ಯವಿದ್ದಲ್ಲಿ ನಿವೇಶನಗಳು ಬೇಡಿಕೆ ಬಂದಲ್ಲಿ ಅವುಗಳನ್ನು ತಾಲೂಕು ಆಡಳಿತ ಹಾಗೂ ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ಪರಿಹರಿಸಲಾಗುವುದು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಗ್ಯಾರಂಟಿ ಸಮಿತಿ ಅಧ್ಯಕ್ಷ ಗದ್ದಿಗೆ ತಿಪ್ಪೆ ಸ್ವಾಮಿ ಹಾಗೂ ವಿವಿಧ ಸಮುದಾಯದ ಹಲವು ಮುಖಂಡರುಗಳು ಭಾಗವಹಿಸಿದ್ದರು.

About The Author

Namma Challakere Local News
error: Content is protected !!