ಚಳ್ಳಕೆರೆ :
ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಬೈಕ್ ಡಿಕ್ಕಿ ಒರ್ವನ ಸಾವು ಮೂವರಿಗೆ ಗಂಭೀರ ಗಾಯ….
ಚಳ್ಳಕೆರೆ..
ಲಾರಿ ಇಳಿದು ಊಟಕ್ಕೆಂದು ರಸ್ತೆ ದಾಟುತ್ತಿದ್ದ ಲಾರಿ ಚಾಲಕರಿಗೆ ಬೈಕ್ ಡಿಕ್ಕಿ ಪಡಿಸಿದ ಪರಿಣಾಮ ಲಾರಿ ಚಾಲಕ ಸ್ಥಳದಲ್ಲಿ ಮೃತಪಟ್ಟಿದ್ದು ಬೈಕಿನಲ್ಲಿದ್ದ ಇಬ್ಬರು ಹಾಗೂ ಲಾರಿಯ ಡ್ರೈವರ್ ಜೊತೆಗಿದ್ದ ಮತ್ತೊರ್ವನಿಗೆ ಗಂಭೀರ ಗಾಯಗಳಾಗಿರುವ ಘಟನೆ ನಡೆದಿದೆ.
ಚಳ್ಳಕೆರೆ ತಾಲೂಕಿನ ಹೊಟ್ಟಪ್ಪನಹಳ್ಳಿ ಆರ್ ಕೆ ಸಾಲ್ವೆಂಟ್ ಬಳಿ ರಾಷ್ಟ್ರೀಯ ಹೆದ್ದಾರಿ 150 ಎ.ರಲ್ಲಿ ಈ ಘಟನೆ ನಡೆದಿದ್ದು.
ತಾಲೂಕಿನ ನಾಗಗೊಂಡನಹಳ್ಳಿ ಸಚಿನ್ ಎನ್ನುವ ಯುವಕ ತನ್ನ ಬೈಕಿನಲ್ಲಿ ಬೆಂಗಳೂರು ಕಡೆಗೆ ಹೋಗುತ್ತಿರುವ ಸಂದರ್ಭದಲ್ಲಿ ಲಾರಿ ಚಾಲಕ ತನ್ನ ಲಾರಿ ಇಳಿದು ಊಟಕ್ಕೆಂದು ಡಾಬಕ್ಕೆ ರಸ್ತೆ ದಾಟುವ ವೇಳೆ ಬೈಕ್ ಡಿಕ್ಕಿ ಹೊಡೆದಿದೆ . ಈ ವೇಳೆ ನರಸಿಂಹಪ್ಪ . ಸ್ಥಳದಲ್ಲಿ ಮೃತಪಟ್ಟರೆ. ಅಶ್ವಥ್ ರೆಡ್ಡಿ ಹಾಗೂ ಸಚಿನ್ ಮತ್ತು ಸಂಜೀವ್ ಈ ಮೂವರಿಗೆ ಗಂಭೀರ ಗಾಯಗಳಾಗಿದ್ದು ಇವರನ್ನ ತಕ್ಷಣವೇ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಚಳ್ಳಕೆರೆ ಡಿವೈಎಸ್ಪಿ ಟಿಬಿ ರಾಜಣ್ಣ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ..
ಚಳ್ಳಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.

