ಚಳ್ಳಕೆರೆ :
ಪರುಶುರಾಂಪುರ ತಾಲ್ಲೂಕು ಕೇಂದ್ರಕ್ಕೆ ಕಳೆದ ಇಪ್ಪತ್ತು ವರ್ಷಗಳಿಂದ ನಿರಂತರವಾಗಿ ನಮ್ಮ ಹೋರಾಟ ಇದೆ ಆದರೆ ಕಾಂಗ್ರೆಸ್ ಪ್ರೇರಿತ ಕಾಂಗ್ರೆಸ್ ಮುಖಂಡರು ಮಾಡಿರುವ ಹೋರಾಟ ಎಂದು ಬಿಜೆಪಿ ನಾಯಕರು ಹೇಳುವುದು ಸರಿಯಲ್ಲ ತಮ್ಮದೇ ಆದ ಪಕ್ಷದ ವಿರುದ್ಧ ತಾಲ್ಲೂಕು ಕೇಂದ್ರ ಮಾಡಲು ಒತ್ತಾಯ ಮಾಡುತ್ತಾರೆ ಎಂದರೆ ಅವರಿಗೆ ಎಷ್ಟಿದೆ ಕಿಚ್ಚು ಎಂಬುದು ಬಿಜೆಪಿ ಗರು ಮನವರಿಕೆ ಮಾಡಿಕೊಳ್ಳಬೇಕು ಎಂದು ಅಂಖಡ ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ನಾಗರಾಜ್ ಕಿಡಿಕಾರಿದ್ದಾರೆ
ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮ ದೊಂದಿಗೆ ಮಾತನಾಡಿದ ಅವರು ಪರುಶುರಾಂಪುರ ತಾಲ್ಲೂಕು ಕೇಂದ್ರ ಮಾಡುವಹದು ಪ್ರತಿಯೊಬ್ಬನ ಹೋರಾಟ ವಾಗಿದೆ ಆದರೆ ನಮ್ಮ ರೈತ ಸಂಘ ನೇತೃತ್ವದಲ್ಲಿ ನಡೆಸಿದ ಹೋರಾಟದಲ್ಲಿ ಪಕ್ಷ ಬೇಧ ಮರೆತು ಸಂಘ ಸಂಸ್ಥೆಗಳು ಭಾಗವಹಿಸಿ ತಾಲ್ಲೂಕು ಕೇಂದ್ರಕ್ಕೆ ಒತ್ತಾಯ ಮಾಡಿದ್ದಾರೆ ಆದರೆ ಬಿಜೆಪಿ ಗರು ಮಾತ್ರ ಕಾಂಗ್ರೆಸ್ ಪ್ರೇರಿತ ಹೋರಾಟ ಎನ್ನುವುದು ಹಿಂಪಡೆಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ಸಂಧರ್ಭದಲ್ಲಿ ಹಲವಾರು ರೈತ ಮುಖಂಡರು ಭಾಗವಹಿಸಿದ್ದರು.

