ಹೊಳಲ್ಕೆರೆ: ನಿರಂತರ ಮಳೆ : ರಾಗಿ ಬೆಳೆಗೆ ಜೀವ ಕಳೆ
ಚಿಕ್ಕಜಾಜೂರು ಹೋಬಳಿಯಲ್ಲಿ ಕಳೆದ ಮೂರು ದಿನಗಳಿಂದ
ಸುರಿಯುತ್ತಿರುವ ಮಳೆಯು ರಾಗಿ ಬೆಳೆಗೆ ಹೊಸ ಜೀವಕಳೆ ತಂದಿದೆ.
ಇದರಿಂದ ರೈತರ ಮೊಗದಲ್ಲಿ ಸಂತಸ ಮೂಡಿದೆ. ಚಿಕ್ಕಜಾಜೂರು,
ಚಿಕ್ಕಂದವಾಡಿ, ಅರ್ಸನಘಟ್ಟ, ನಮನಕಟ್ಟೆ ಸೇರಿದಂತೆ ಹಲವು
ಪ್ರದೇಶಗಳಲ್ಲಿ ಮಳೆಯಾಗಿದ್ದು, ಜಮೀನು ಮತ್ತು ರಸ್ತೆಗಳಲ್ಲಿ ನೀರು
ನಿಂತಿದೆ.

