ಚಳ್ಳಕೆರೆ : ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗೆ ಲಾಟರಿ ಮೂಲಕ
ಒಲಿದ ಉಪಾಧ್ಯಕ್ಷ ಸ್ಥಾನ…
ಹೌದು ಇದು ಚಳ್ಳಕೆರೆ ತಾಲೂಕಿನ ಗೌರಸಮುದ್ರ
ಗ್ರಾಮಪಂಚಾಯಿತಿಯಲ್ಲಿ ತೆರವಾದ ಉಪಾಧ್ಯಕ್ಷ ಸ್ಥಾನಕ್ಕೆ
ಮಂಗಳವಾರ ಚುನಾವಣಾ ಆಯ್ಕೆ ಪ್ರಕ್ರಿಯೆ ಮೂಲಕ
ತಾಲೂಕು ಪಂಚಾಯತ್ ಇಒ ಶಶಿಧರ್
ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ನಡೆದ
ಚುನಾವಣೆಯಲ್ಲಿ ತುಳಸಮ್ಮ ಹಾಗೂ ಟಿ.ನಾಗವೇಣಿ
ಇಬ್ಬರು ನಾಮ ಪತ್ರ ಸಲ್ಲಿಸಿದ್ದರು.
23 ಸದಸ್ಯರಿದ್ದು. ತಲಾ11 ಮತಗಳನ್ನು ಪಡೆದರೆ 1 ಮತ
ಪತ್ರ ಯಾರಿಗೂ ಮತ ಹಾಕದೆ ಖಾಲಿ ಮತ ಪತ್ರವನ್ನು
ಮತ ಗಟ್ಟೆಕೆ ಹಾಕಿರುವುದರಿಂದ ಅದು ಇನ್ ವ್ಯಾಲಿಡ್
ಆಗಿದ್ದು ಲಾಟರಿ ಮಾಡಿದಾಗ
ಟಿ.ನಾಗವೇಣಿ ಗೆ ಲಾಟರಿಯಲ್ಲಿ ಗೆದ್ದು ನಗೆ ಬೀರಿದ್ದಾರೆ .
ಇನ್ನೂ ಗ್ರಾಮ ಪಂಚಾಯಿತಿ ಅಧ್ಯಕ್ಷ ಓಬಣ್ಣ ಮಾಧ್ಯಮದೊಂದಿಗೆ ಮಾತನಾಡಿ, ನಮಗೆ ಸಿಕ್ಕ ಜಯವಾಗಿದೆ, ಗ್ರಾಮ ಪಂಚಾಯತಿ ಸರ್ವ ಸದಸ್ಯರ ಸಹಕಾರ ಪಡೆದು ಸರ್ವತೋಮುಖ ಅಭಿವೃದ್ಧಿಗೆ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಸರ್ವತೋಮುಖ ಅಭಿವೃದ್ಧಿಯತ್ತ ಕೆಲಸ ಮಾಡುವೆ ರಾಜ್ಯದ ಆರಾಧ್ಯ ದೇವಿ ಶ್ರೀ ಗೌರಸಮುದ್ರ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವವನ್ನು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಬಹಳ ಸಂಭ್ರಮ ಸಡಗರದಿಂದ ನಮ್ಮ ಗ್ರಾಮ ಪಂಚಾಯಿತಿ ವತಿಯಿಂದ ಅದ್ದೂರಿಯಾಗಿ ನೆರವೇರಿಸಲು ಸಹಕಾರವನ್ನು ನೀಡುತ್ತೇವೆ ಎಂದು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ಸರ್ವ ಸದಸ್ಯರುಗಳು, ಗ್ರಾಮ ಪಂಚಾಯತಿಯ ಗ್ರಾಮ ಅಭಿವೃದ್ಧಿ ಅಧಿಕಾರಿಗಳು ಸಾರ್ವಜನಿಕರು ಹಾಗೂ ಇತರರು ಪಾಲ್ಗೊಂಡಿದ್ದರು

