ಚಳ್ಳಕೆರೆ :

ಚಳ್ಳಕೆರೆ: ಜೋಡಿ ಚಿರತೆಗಳು ಪ್ರತ್ಯಕ್ಷ- ಜನರಲ್ಲಿ
ಮೂಡಿದ ಆತಂಕ
ಕುದಾಪುರ ಸಮೀಪದ ಡಿಆರ್ ಡಿಓ ಬಳಿ ಜೋಡಿ ಚಿರತೆಗಳು
ಪ್ರತ್ಯಕ್ಷವಾಗಿದ್ದು, ಚಳ್ಳಕೆರೆ ಕುದಾಪುರ ಬಳಿಯಿರುವ ಡಿ ಆರ್
ಡಿಓ ಕಾಂಪೌಂಡ್ ಪಕ್ಕದಲ್ಲಿಂದು ತಡರಾತ್ರಿ ಎರಡು ಚಿರತೆಗಳು
ಪ್ರತ್ಯಕ್ಷವಾಗಿದ್ದು, ರಸ್ತೆ ದಾಟುತ್ತಿರುವುದನ್ನು ಕಂಡು ಜನರು
ಬೆಚ್ಚಿಬಿದ್ದಿದ್ದಾರೆ. ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಭಯದ
ವಾತಾವರಣ ಮೂಡಿದೆ. ಜೋಡಿ ಚಿರತೆಗಳಿಂದ ಭಯಕ್ಕೆ ಒಳಗಾದ
ಜನರು ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿಗಳನ್ನು ಬೋನಿಟ್ಟು
ಚಿರತೆಗಳನ್ನು ಹಿಡಿದು ಜನರಲ್ಲಿರುವ ಭಯದ ವಾತಾವರಣ
ಹೋಗಲಾಡಿಸಬೇಕೆಂದು ಒತ್ತಾಯಿಸಿದ್ದಾರೆ.

About The Author

Namma Challakere Local News
error: Content is protected !!