ಹಿರಿಯೂರು ಸುದ್ದಿ :
ಚಿಗಳಿಕಟ್ಟೆ ಸರ್ಕಾರಿ ಶಾಲೆಯಲ್ಲಿ ಸಂಭ್ರಮದ ‘ಕಲಿಕಾ ಹಬ್ಬ’
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಚಿಗಳಿಕಟ್ಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚಿಗೆ ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರ (FLN) ಕಲಿಕಾ ಹಬ್ಬವನ್ನು ಅತ್ಯಂತ ಅರ್ಥಪೂರ್ಣವಾಗಿ ಆಯೋಜಿಸಲಾಗಿತ್ತು.
ತಹಶೀಲ್ದಾರ್ ಶ್ರೀ ಸಿದ್ದೇಶ್ ಅವರು ‘ಕಲಿಕಾ ಚಿಟ್ಟೆ’ಯನ್ನು ಅನಾವರಣಗೊಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಮಕ್ಕಳು ಕಲಿಕಾ ಸಾಮರ್ಥ್ಯ ಬೆಳೆಸಿಕೊಳ್ಳಲು ಶಿಕ್ಷಕರೊಂದಿಗೆ ಪೋಷಕರೂ ಸಹಕರಿಸಬೇಕು” ಎಂದು ಕರೆ ನೀಡಿದರು.
ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಡಾ. ಪ್ರಮೋದ್ ಅವರು, “ಮಕ್ಕಳು ಮೊಬೈಲ್ ಗೀಳಿನಿಂದ ಹೊರಬಂದು ಅದನ್ನು ಶಿಕ್ಷಣಕ್ಕಾಗಿ ಮಾತ್ರ ಬಳಸಬೇಕು. ‘ಪ್ರಶ್ನೆಯು ಪ್ರಜ್ಞೆಯಾಗಲಿ’ ಎಂಬ ಧ್ಯೇಯದೊಂದಿಗೆ ಕಲಿಕೆಯಲ್ಲಿ ತೊಡಗಿಸಿಕೊಳ್ಳಿ” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸರ್ಕಾರಿ ಶಾಲೆಗೆ ಕೊಡುಗೆಗಳ ಮಹಾಪೂರ:
C.R. ಧನಂಜಯ (CLR ಟ್ರಸ್ಟ್) ಚಿಗಳಿಕಟ್ಟೆ ಇವರು ಯಲ್ಲದಕೆರೆ ಕ್ಲಸ್ಟರ್ ವ್ಯಾಪ್ತಿಯ 520 ವಿದ್ಯಾರ್ಥಿಗಳಿಗೆ ಉಚಿತವಾಗಿ ಶಾಲಾ ಬ್ಯಾಗ್ ವಿತರಿಸಿ ಮಾತನಾಡುತ್ತ ದಿನನಿತ್ಯದ ಬದುಕಿನಲ್ಲಿ ಅಕ್ಷರ ಜ್ಞಾನ ಮತ್ತು ಗಣಿತ ಜ್ಞಾನದ ಅವಶ್ಯಕತೆಯನ್ನು ತಿಳಿಸಿಕೊಟ್ಟರು. ಇದೇ ಕಾರ್ಯಕ್ರಮದಲ್ಲಿ ಹಿರಿಯೂರಿನ ಫೋಟೋಗ್ರಾಫರ್
ಶ್ರೀ ಅಭಿಷೇಕ್ ಸೂರಿ ಮತ್ತು ಶ್ರೀಮತಿ ಪಲ್ಲವಿ ಇವರು ವಿದ್ಯಾರ್ಥಿಗಳಿಗೆ ಸ್ಟಡಿ ಚೇರ್ಗಳನ್ನು ಕೊಡುಗೆಯಾಗಿ ನೀಡಿದರು ಹಾಗೂ
ಶ್ರೀಮತಿ ಅಂಬಾದೇವಿರ ವರು ಶಾಲೆಗೆ ಪ್ರಿಂಟರ್ ಅನ್ನು ಕೊಡುಗೆಯಾಗಿ ನೀಡಿದರು. ಈ ಎಲ್ಲಾ ದಾನಿಗಳನ್ನು ಕಾರ್ಯಕ್ರಮದಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು. ನಂತರ ಮಾತನಾಡಿದ ಡಯಟ್ ಉಪನ್ಯಾಸಕ ಶ್ರೀ ರೇವಣ್ಣ ಅವರು “FLN ಸಾಮರ್ಥ್ಯಗಳು ವಿದ್ಯಾರ್ಥಿಗಳ ಭವಿಷ್ಯದ ಶೈಕ್ಷಣಿಕ ಯಶಸ್ಸಿಗೆ ಭದ್ರ ಬುನಾದಿ” ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಡಯಟ್ ಉಪನ್ಯಾಸಕರಾದ ಶ್ರೀ ಬಿ ಆರ್ ಪ್ರಸಾದ್, ತಾಲೂಕು ಕ್ಷೇತ್ರ ಸಮನ್ವಯಧಿಕಾರಿ ಆರ್ ಟಿ ಎಸ್ ಶ್ರೀನಿವಾಸ್, ರಾಯಚೂರು ಮತ್ತು ಯಾದಗಿರಿ ಲ್ಯಾಂಡ್ ಆರ್ಮಿ ಎಕ್ಸಿಕ್ಯೂಟಿವ್ ಎಂಜಿನಿಯರ್ C R ಧನಂಜಯ್, ಹಿರಿಯೂರು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷರಾದ ಶ್ರೀ C H ಕಾಂತರಾಜ್, ವೈದ್ಯರಾದ ಶ್ರೀಮತಿ ಪದ್ಮ ಶಿವರಾಜ್ ಮಧುಗಿರಿ, ಓಂಕಾರಪ್ಪ, ಲಕ್ಷ್ಮಣಪ್ಪ, ತಾಲೂಕು ಬಡ್ತಿ ಮುಖ್ಯಗುರುಗಳ ಸಂಘದ ಅಧ್ಯಕ್ಷರಾದ ಎಂ ರಾಜಣ್ಣ, ಯಲ್ಲದಕೆರೆ CRP ದೇವೇಂದ್ರಪ್ಪ ಹೆಚ್, ಮಹಾಸ್ವಾಮಿ, SDMC ಅಧ್ಯಕ್ಷರಾದ ಶಾಮಣ್ಣ, ಉಪಾಧ್ಯಕ್ಷರಾದ ಸುಪ್ರಿಯಾ ನಾಗರಾಜ್ ಸೇರಿದಂತೆ ಶಾಲೆಯ ಮುಖ್ಯಗುರುಗಳಾದ ಟಿ ಅಶೋಕ್, ಶಿಕ್ಷಕರಾದ ಬೆಳಕು ಪ್ರಿಯ ಮುರುಳಿ, ತಿಪ್ಪೇಸ್ವಾಮಿ, ಹನುಮಂತಪ್ಪ, ಹರೀಶ್, ಗೀತಮ್ಮ, ಜಯಮಾಲಾ, ಹಾಗೂ ಗ್ರಾಮಸ್ಥರು, ಹಳೆ ವಿದ್ಯಾರ್ಥಿಗಳು, ಯಲ್ಲದಕೆರೆ ಕ್ಲಸ್ಟರ್ ಶಾಲೆಗಳ ಶಿಕ್ಷಕರು ಹಾಜರಿದ್ದರು.
ಎಲ್ಲರ ಸಹಕಾರದೊಂದಿಗೆ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು

