ಚಳ್ಳಕೆರೆ :
ಚಿತ್ರದುರ್ಗ: ನ್ಯೂಸ್ ರೂಂ ಗಳಲ್ಲಿ ಯಂಗ್
ಅಂಬೇಂಡ್ಕರ್ ಸೃಷ್ಠಿಸಬೇಕು
ಮಾದ್ಯಮಗಳು ಇಂದು ಅಂಬೇಡ್ಕರ್ ತತ್ವಾದರ್ಶಗಳನ್ನು
ಆಳವಡಿಸಿಕೊಳ್ಳಬೇಕು. ಆದರೆ ಮಾದ್ಯಮಗಳು ಇದನ್ನು
ಅಳವಡಿಸಿಕೊಳ್ಳುತ್ತಿಲ್ಲವೆಂದು ಕರ್ನಾಟಕ ಮಾಧ್ಯಮ ಅಕಾಡೆಮಿ
ಅಧ್ಯಕ್ಷೆ ಆಯೇಷಾ ಖಾನಂ ಹೇಳಿದರು.
ಕರ್ನಾಟಕ ಮಾಧ್ಯಮ
ಆಕಾಡೆಮಿ ಹಾಗೂ ವಿವಿಧ ಸಂಘ-ಸಂಸ್ಥೆಗಳಿಂದ ಇಂದು ನಗರದಲ್ಲಿ
ಆಯೋಜಿಸಿದ್ದ ಅಂಬೇಡ್ಕರ್ ದೃಷ್ಟಿಯಲ್ಲಿ ಸುದ್ದಿ- ಮಾಧ್ಯಮ
ವಿಚಾರಣ ಸಂಕೀರ್ಣ ಕಾರ್ಯಕ್ರಮದಲ್ಲಿ ಮಾತನಾಡಿ, ಯುವ
ಪತ್ರಕರ್ತರನ್ನು ಅಂಬೇಡ್ಕರ್ ರೀತಿ ಚಿಂತಿಸುವಂತೆ ನ್ಯೂಸ್
ರೂಂಗಳಲ್ಲಿ ತಯಾರು ಮಾಡಬೇಕು. ಆದರೆ ಕೇವಲ ಸೆನ್ಸೆಷನಲ್
ನ್ಯೂಸ್ ಗಳಿಗೆ ಮಾತ್ರ ಆದ್ಯತೆ ನೀಡುತ್ತಿದ್ದೇವೆ. ಇನ್ನಾದರೂ
ಮಾಧ್ಯಮಗಳು ಬದಲಾಗಬೇಕೆಂದರು.

