ಚಳ್ಳಕೆರೆ :
ಕೆರೆ ಕಾಲುವೆ ದುರಸ್ಥಿಗೆ ಮುಂದಾದ ಸ್ವಾಮೀಜಿ
ಹೌದು ಇದು ಚಳ್ಳಕೆರೆ ತಾಲೂಕಿನತಾಲ್ಲೂಕಿನ ಕಸಬಾ ಹೋಬಳಿಯಲ್ಲಿಯೇ ಎರಡನೇ ಅತಿದೊಡ್ಡ ಕೆರೆಯಾಗಿರುವ ದೊಡ್ಡೇರಿ ಗ್ರಾಮದ ದೊಡ್ಡಕೆರೆ ಕಳೆದ ಹಲವಾರು ವರ್ಷಗಳಿಂದ ಸರಿಯಾಗಿ ಕೆರೆಗೆ ನೀರು ಹರಿಯುತ್ತಿಲ್ಲ
ದೋಡ್ಡೇರಿಗೆ ಕೆರೆಗೆ ನೀರು ಹರಿಯುವ ಗೋಪನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ಗರಣಿ ಸೇತುವೆ ಯಿಂದ ದೊಡ್ಡೇರಿ ಕೆರೆಗೆ ನೀರು ಹರಿಯುವ ಪೀಡರ್ ಚಾನಲ್ ಕಿರಿದಾಗಿದ್ದು ಗಿಡಗೆಂಟೆಗಳು ಬೆಳೆದಿರುದರಿಂದ ಕೆರೆಗೆ ನೀರು ಹರಿಯದೇ ಇರುವುದನ್ನ ಮನಗಂಡ ದೊಡ್ಡೇರಿ ಕನ್ನೇಶ್ವರ ಆಶ್ರಮದ ಶ್ರೀಮಲ್ಲಪ್ಪಸ್ವಾಮಿಗಳು ಗರಣಿ ಸೇವೆಯಿಂದ ದೊಡ್ಡೇರಿ ಕೆರೆ ಕಾಲುವೆ ಸುಮಾರು 7 ಕಿ.ಮೀ ದೂರದ ಕಾಲುವೆಗೆ ಗುರುವಾರ ಕಾಲುವೆಯ ಎರಡು ಬದಿ ದಡಗಳ ದುರಸ್ಥಿ ಹಾಗೂ ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಿದ್ದಾರೆ.
ಶ್ರೀಮಲ್ಲಪ್ಪ ಸ್ವಾಮೀಜಿ ಮಾತನಾಡಿ ಕ್ಷೇತ್ರದ ಸಂಸದ ಗೋವಿಂದಕಾರಜೋಳ ಹಾಗೂ ಶಾಸಕ ಟಿ.ರಘುಮೂರ್ತಿಯವರ ಗಮನ ಸೆಳೆಯಲಾಗಿದ್ದು ಅವರೂ ಸಹ ಕಾಲುವೆ ದುರಸ್ಥಿಗೆ ಸ್ಪಂದಿಸಿ ಕೆಲಸವೂ ಮಾಡಿಸಿದ್ದಾರೆ ಆದರೆ ಗುತ್ತಿಗೆ ದಾರರು ಸರಿಯಾಗಿ ಮಾಡದೆ ಕೆಲಸ ಮಾಡಿದ ಕಾಮಗಾರಿಗೆ ಸರಕಾರ ಹಣ ಬಿಡುಗಡೆ ಮಾಡದೆ ಕಾಮಗಾರಿ ಸರಿಯಾಗಿ ಆಗುತ್ತಿಲ್ಲ ಆದ್ದರಿಂದ ದೊಡ್ಡೇರಿ ಕೆರೆಗೆ ನೀರು ಹರಿಯದೆ ಬರಿದಾಗಿದೆ ಆದ್ದರಿಂದ ಪ್ರತಿವರ್ಷ ನಾನು ವೈಯುಕ್ತಿಕವಾಗಿ ಕಾಲುವೆ ದುರಸ್ಥಿ ಮಾಡಿಸುತ್ತೇನೆ ಎಂದು ತಿಳಿಸಿದರು.

