ಚಳ್ಳಕೆರೆ :
ತಾಯಂದಿರು ಕಡಿಮೆ ತೂಕದ ಮಗು ವನ್ನು ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿ ಮಕ್ಕಳಿಗೆ ಚಿಕಿತ್ಸೆ ಕೊಡಿಸಬೇಕು ಎಂದು ಬೇಡರೆಡ್ಡಿಹಳ್ಳಿ ವೃತ್ತದ ಡಾ.ಅನಿತಾ ಹೇಳಿದರು.
ಅವರು ತಾಲೂಕಿನ ಮಿಟ್ಲಕಟ್ಟೆ ಗ್ರಾಮದ ಅಂಗವಾಡಿ ಕೇಂದ್ರದಲ್ಲಿ ಸ್ಥನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು,
ತಾಯಿ ಎದೆ ಹಾಲಿನ ಮಹತ್ವವನ್ನು ಎಲ್ಲಾ ತಾಯಂದಿರ ತಿಳಿಯಬೇಕು, ಮಕ್ಕಳ ಅಂತರದ ಬಗ್ಗೆ ತಂದೆ ತಾಯಂದಿರು ಇಬ್ಬರು ವೈಧ್ಯರ ಬಳಿ ಸಲಹೆ ಪಡೆದು ಮಕ್ಕಳ ಅಂತರದ ಬಗ್ಗೆ ತಿಳಿಯಬೇಕು, ಮಕ್ಕಳಿಗೆ ಉತ್ತಮ ಪೌಷ್ಠಿಕ ಆಹಾರ ಹಾಗೂ ಸುಚಿತ್ವವನ್ನು ಗುಣಮಟ್ಟದಿಂದ ಕಾಪಾಡಿಕೊಳ್ಳಬೇಕು, ಉಚಿತ ಚಿಕಿತ್ಸೆಗೆ ಎನ್ ಆರ್ ಸಿ ಕೇಂದ್ರಕ್ಕೆ ದಾಖಲಿಸಿ ತಾಯಿ ಮಗುವಿನ ಚಿಕಿತ್ಸೆ ಅಗತ್ಯವಾಗಿದೆ ಎಂದರು.
ಇದೇ ಸಂಧರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆ ಎನ್.ಜ್ಯೋತಿ, ಜಿ.ಮಹಾದೇವಿ, ಲಕ್ಷ್ಮೀ, ಸಹಾಯಕಿ ಓಬಕ್ಕ, ಆಶಾ ಕಾರ್ಯಕರ್ತೆ ಅಂಜಿನಮ್ಮ, ಮಕ್ಕಳ ಪೋಷಕರು, ಹಾಜರಿದ್ದರು.

