ಚಳ್ಳಕೆರೆ : ಸರ್ವರನ್ನು ಸಲುವುವ ವಿಘ್ನ ವಿನಾಯಕನ ಚತುರ್ಥಿ ಎಲ್ಲಾ ಸರ್ವ ಭಕ್ತಾದಿಗಳು ಒಡಗೂಡಿ ಮಾಡುವಂತಹ ಕಾರ್ಯ ಶಾಂಘ್ಲನೀಯ ಎಂದು ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು, ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ.ರಘುಮೂರ್ತಿ ಹೇಳಿದರು.
ಅವರು ಚಳ್ಳಕೆರೆ ನಗರದ ಕ್ಷೇತ್ರ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ವತಿಯಿಂದ ಪ್ರತಿಷ್ಟಾಪನೆ ಮಾಡಿದ್ದ
ಹಿಂದೂ ಮಹಾಗಣಪತಿ
ಸನ್ನಿಧಾನಕ್ಕೆ ಧಾವಿಸಿ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು
ತಾಲೂಕಿನ ಎಲ್ಲಾ ಭಕ್ತಾದಿಗಳು ಒಂದುಗೂಡಿ ಹಿಂದೂ ಮಹಾ ಗಣಪತಿ ಚತುರ್ಥಿ ಆಚರಣೆ ಮಾಡುವುದು ಸಂತಸ ತಂದಿದೆ.
ಆದ್ದರಿಂದ ನಾಳೆ ನಡೆಯುವಂತಹ ಬೃಹತ್ ಶೋಭಾ ಯಾತ್ರೆಗೆ ಈಗಾಗಲೇ ಸಕಲ ಸಿದ್ಧತೆಗಳು ತಯಾರಾಗಿದ್ದು ಎಲ್ಲಾ ಭಕ್ತರು ಆಗಮಿಸಿ ಹಿಂದೂ ಮಹಾ ಗಣಪತಿಯ ಬೃಹತ್ ಶೋಭಯಾತ್ರೆ ಯಶಸ್ಸಿಗೊಳಿಸಬೇಕು ಎಂದು ಆಶಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ಶಿಲ್ಪ ಮುರಳೀಧರ್, ಉಪಾಧ್ಯಕ್ಷರಾದ ಕವಿತಾ ಬೋರಯ್ಯ, ಸದಸ್ಯರಾದ ಸುಜಾತ ಪ್ರಹ್ಲಾದ್, ಕವಿತಾ ವೀರೇಶ್, ರಮೇಶ್ ಗೌಡ, ತಾಲ್ಲೂಕು ಪಂಚಾಯತ್ ಕೆಡಿಪಿ ನಾಮ ನಿರ್ದೇಶನ ಸದಸ್ಯರಾದ ರಮೇಶ್, ಸುರೇಶ್ ಕುಮಾರ್, ಬಸವರಾಜ್, ನಗರಸಭೆ ನಾಮ ನಿರ್ದೇಶನ ಸದಸ್ಯರಾದ ಬಡಗಿ ಪಾಪಣ್ಣ, ತಾಲ್ಲೂಕು ಗ್ಯಾರೆಂಟಿ ಸಮಿತಿಯ ಅಧ್ಯಕ್ಷರಾದ ಗದ್ದಿಗೆ ತಿಪ್ಪೇಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವೀರಭದ್ರಯ್ಯ, ಮುಖಂಡರಾದ ಪ್ರಹ್ಲಾದ್, ಕೃಷ್ಣಮೂರ್ತಿ, ಬೋರಯ್ಯ, ವೀರೇಶ್, ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

