ಚಳ್ಳಕೆರೆ

ಚಿನ್ನದ ಬೆಲೆ ಗಗನಕ್ಕೆ: ಚಿನ್ನದ ಕೆಲಸಗಾರರು ಪಾತಾಳಕ್ಕೆ:

ಕಳೆದ ಕೆಲ ದಿನಗಳ ಹಿಂದೆ ಚಿನ್ನದ ಬೆಲೆ 10 ಗ್ರಾಂ ಚಿನ್ನಕ್ಕೆ 60 ರಿಂದ 70, ಸಾವಿರ ಇದ್ದು, ಕೇವಲ ಒಂದು ತಿಂಗಳ ನಂತರ 1,10,000 ಚಿನ್ನದ ಬೆಲೆ ಏರಿಕೆ ಕಂಡಿದ್ದು, ಚಿನ್ನ ಬೆಳ್ಳಿ ಕೆಲಸಗಾರರಿಗೆ ಆತಂಕ ತಂದು ಒಡ್ಡಿದೆ

ಹೌದು
ಚಿನ್ನ ಹಾಗೂ ಬೆಳ್ಳಿ ಬೆಲೆಗಳು ಏಕಕಾಲಕ್ಕೆ ದ್ವಿಗುಣ ಗೊಂಡ ಹಿನ್ನಲೆ ದೇಶ ಸೇರದಂತೆ ಹಲವಾರು ರಾಜ್ಯಗಳಲ್ಲಿ ಚಿನ್ನದ ವ್ಯಾಪಾರಿಗಳು ಸೇರಿದಂತೆ ಕೆಲಸಗಾರರಿಗೆ ಕೆಲಸವಿಲ್ಲದಂತಾಗಿದೆ, ಈ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲೆ, ಹಿರಿಯೂರು ಚಳ್ಳಕೆರೆ ತುಮಕೂರು ಬೆಂಗಳೂರು ಸೇರಿದಂತೆ ಚಿನ್ನದ ಕೆಲಸಗಾರರು ನೆಲಕಚ್ಚಿದ್ದಾರೆ,

ಈ ಹಿಂದೆ ಸಂಕಷ್ಟದಲ್ಲಿದ್ದ ಚಿನ್ನದ ಕೆಲಸಗಾರರು ಈಗ ಮುಗಿಲು ನೋಡುವಂತ ಸ್ಥಿತಿ ಬಂದು ಒದಗಿದೆ, ಈ ರೀತಿಯ ಚಿನ್ನದ ಏರಿಕೆ ಕಂಡು ಅಂಗಡಿ ಮಾಲೀಕರು ಕೆಲಸಗಾರರಿಗೆ ಕೆಲಸ ಕೊಡಲಿಕ್ಕೆ ಹಿಂದೇಟು ಹಾಕುತ್ತಿದ್ದಾರೆ, ಈ ಕಾರಣದಿಂದಾಗಿ ದೇಶವಲ್ಲದೆ ರಾಜ್ಯದಲ್ಲಿ ಅಲ್ಲೋಲಕಲ್ಲೋಲ ಪರಿಸ್ಥಿತಿ ಉಲ್ಬಣಗೊಂಡಿದೆ,

ಚಿನ್ನ ಬೆಳ್ಳಿ ಕೂಲಿ ಕಾರ್ಮಿಕರು ತಮ್ಮ ದಿನ ನಿತ್ಯದ ಕೆಲಸಕ್ಕೆ ತೊಂದರೆಯಾಗಿದ್ದು, ತಮ್ಮ ಮನೆಯ ಹಾಗೂ ಅಂಗಡಿಗಳ ಬಾಡಿಗೆಯನ್ನು ಕಟ್ಟಲಾರದೆ ಗೂಳಿ ಹೋಗುವ ಪರಿಸ್ಥಿತಿ ಬಂದೋರಿಗಿದೆ,

ಇನ್ನು ಚಿನ್ನ ಬೆಳ್ಳಿ ಕೆಲಸಗಾರರು ವಿಶ್ವಕರ್ಮ ಸಮುದಾಯದವರಾಗಿದ್ದು, ಈ ಒಂದು ಸಮುದಾಯಕ್ಕೆ ಸರಕಾರದಿಂದ ಬರುವ ಯಾವುದೇ ಸೌಲಭ್ಯಗಳು ಇವರ ಸಮುದಾಯಗಳಿಗೆ ತಲುಪಿಲ್ಲ, ಈ ಹಿನ್ನೆಲೆ ಚಿನ್ನ ಬೆಳ್ಳಿ ಕೂಲಿ ಕಾರ್ಮಿಕರು ಬೇರೆ ಕೆಲಸಕ್ಕೆ ಅವಲಂಬಿತರಾಗಿದ್ದಾರೆ, ಇದು ಅಲ್ಲದೆ ಕಾರ್ಮಿಕರು ತಮ್ಮ ವೃತ್ತಿ ಧರ್ಮವನ್ನು ಬಿಟ್ಟು ಗೂಳಿ ಹೋಗಿ ಅನ್ಯ ಕಸುಬುಗಳಿಗೆ ಮಾರು ಹೋಗಿದ್ದಾರೆ,

ದೇಶದ ಎಲ್ಲ ಸಮುದಾಯಗಳಿಗೆ ರಾಜ್ಯ ರಾಜಕಾರಣಿಗಳು ಮೀಸಲಾತಿ ಕೊಟ್ಟು ಸಂರಕ್ಷಣೆ ಮಾಡುತ್ತಿದೆ, ಆದರೆ ಅಲ್ಪಸಂಖ್ಯಾತರಾದ ಹಿಂದುಳಿದ ವರ್ಗದ ವಿಶ್ವಕರ್ಮ ಸಮುದಾಯಗಳಿಗೆ ಏಕೆ ಅನುದಾನಗಳನ್ನು ನೀಡುತ್ತಿಲ್ಲ ಎಂದು ಚಿನ್ನ ಬೆಳ್ಳಿ ವರ್ತಕರು ಒತ್ತಾಯಿಸಿದ್ದಾರೆ,

R ಪ್ರಸನ್ನ ಕುಮಾರ್ ಬೈಟ್

About The Author

Namma Challakere Local News
error: Content is protected !!