ಶ್ರಾವಣ ಮೂರನೇ ಸೋಮವಾರ ಗುರು ತಿಪ್ಪೇರುದ್ರಸ್ವಾಮಿ ದೇವಾಲಯಕ್ಕೆ ಹರಿದು ಬಂದ ಭಕ್ತ ಸಾಗರ.
ನಾಯಕನಹಟ್ಟಿ:: ಶ್ರಾವಣ ಮಾಸದ ಮೂರನೇ ಸೋಮವಾರ ಪ್ರಯುಕ್ತ ಪಟ್ಟಣದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಾಲಯದ ಒಳಮಠ- ಹೊರಮಠಕ್ಕೆ ಸಾವಿರಾರು ಭಕ್ತರು ಭೇಟಿ ನೀಡಿ ದರ್ಶನ ಪಡೆದರು.
ಒಳಮಠ ಹೊರಮಠದಲ್ಲಿ ಸೋಮವಾರ ಬೆಳಗಿನ ಜಾವದಿಂದ ಆರಂಭವಾದ ಪೂಜಾ ಕಾರ್ಯಗಳು ಸೋಮವಾರ ರಾತ್ರಿ 9:00 ವರೆಗೂ ನಡೆಯುತ್ತವೆ.
ಇದೆ ವೇಳೆಯಲ್ಲಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಎಚ್. ಗಂಗಾಧರಪ್ಪ ಮಾತನಾಡಿದರು. ಶ್ರಾವಣ ಮಾಸದ ಮೂರನೇ ಸೋಮವಾರ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ಹಾಗೂ ಪೂಜಾ ಕಾರ್ಯಗಳು ನಡೆಯುತ್ತದೆ ಬಂದಂತ ಭಕ್ತಾದಿಗಳಿಗೆ ನೆರಳಿನ ವ್ಯವಸ್ಥೆ ಹಾಗೂ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿದೆ ಭಕ್ತರು ಸಾರಧಿ ಸಾಲಿನಲ್ಲಿ ದೇವರ ದರ್ಶನ ಪಡೆದು ಅವರ ಕೈಲಾದ ಅಕ್ಕಿ ಬೇಳೆ ಕಾಣಿಕೆ ರೂಪದಲ್ಲಿ ದೇವರು ಎಲ್ಲರಿಗೂ ಒಳ್ಳೇದು ಮಾಡಲಿ ಶ್ರಾವಣ ಮಾಸದಲ್ಲಿ ಉತ್ತಮ ಮಳೆ ಬೆಳೆ ಆಗಲಿ ಎಂದರು.
ಇದೇ ವೇಳೆ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಪೂಜಾರಿಗಳಾದ ರವಿ, ಶಿವಮೂರ್ತಿ, ದೇವಸ್ಥಾನದ ಸಿಬ್ಬಂದಿಗಳಾದ ಎಸ್. ಸತೀಶ್, ಮನು. ಮಹೇಶ್,ತಿಪ್ಪಮ್ಮ, ಮಂಜುನಾಥ್, ಇದ್ದರು

