ಕೆಸರು ಗದ್ದೆಯಂತಾದ ಜಾಗನೂರಹಟ್ಟಿ- ಕನ್ನಯ್ಯನಹಟ್ಟಿ ರಸ್ತೆ ಸಂಚಾರ ಮಾಡುವ ರೈತರು ವಿದ್ಯಾರ್ಥಿಗಳು ಹೈರಾಣು. ಕರವೇ ಕನ್ನಡ ಸೇನೆ ತಾಲೂಕು ಅಧ್ಯಕ್ಷ ಪಿ. ಮುತ್ತಯ್ಯ ಜಾಗನೂರಹಟ್ಟಿ ಗಂಭೀರ ಆರೋಪ

ನಾಯಕನಹಟ್ಟಿ:: ಪಟ್ಟಣ ಪಂಚಾಯತಿ ವ್ಯಾಪ್ತಿಯ ಒಂದನೇ ವಾರ್ಡ್ ಜಾಗನೂರಹಟ್ಟಿ ಮತ್ತು ಎರಡನೇ ವಾರ್ಡಿಗೆ ಹೋಗುವ ಕನ್ನಯ್ಯನಹಟ್ಟಿ ರಸ್ತೆ ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ರಸ್ತೆ ಕೆಸರು ಗದ್ದೆಯಂತಾಗಿದೆ ಎಂದು ಕರವೇ ಕನ್ನಡ ಸೇನೆ ತಾಲೂಕು ಅಧ್ಯಕ್ಷ ಪಿ ಮುತ್ತಯ್ಯ ಜಾಗನೂರಹಟ್ಟಿ ತಿಳಿಸಿದ್ದಾರೆ.

ಅವರು ಸೋಮವಾರ ಪಟ್ಟಣ ಪಂಚಾಯತಿ ವ್ಯಾಪ್ತಿಯ ಜಾಗನೂರಹಟ್ಟಿ ಗ್ರಾಮದಲ್ಲಿ ಮಳೆಯಿಂದಾಗಿ ಕೆಸರುಗದ್ದೆ ಅಂತಾಗಿರುವ ರಸ್ತೆ ವೀಕ್ಷಣೆ ಮಾಡಿ ಮಾತನಾಡಿದವರು ಒಂದನೇ ವಾರ್ಡಿನ ಜಾಗನೂರಹಟ್ಟಿಯಿಂದ ಪ್ರತಿ ದಿನ ಕನ್ನಯ್ಯನಹಟ್ಟಿ ಶಾಲೆಗೆ ಹೋಗುವ ವಿದ್ಯಾರ್ಥಿಗಳು ಮತ್ತು ಜಮೀನುಗಳಿಗೆ ಹೋಗುವ ರೈತರು ರಸ್ತೆಯಲ್ಲಿ ಸಂಚಾರ ಮಾಡುವುದರಿಂದ ತೊಗ್ಗು ಗುಂಡಿಗಳಿಂದ ಕೂಡಿರುವ ರಸ್ತೆಯಲ್ಲಿ ಸಂಚಾರ ಮಾಡುವುದೇ ಕಷ್ಟಕರವಾಗಿದೆ. ಇನ್ನೂ ಜಾಗನೂರಹಟ್ಟಿ ಗ್ರಾಮದಲ್ಲಿ ಜೆಜೆಎಂ ಜಲಜೀವನ ಮಿಷನ್ ಕಾಮಗಾರಿ ಮಾಡುವವರು ರಸ್ತೆ ತುಂಬೆಲ್ಲ ತೊಗ್ಗು ಗುಂಡಿಗಳನ್ನ ತೆಗೆದಿರುವುದರಿಂದ ಗ್ರಾಮದಲ್ಲಿ ಬೈಕ್ ಸವಾರರು ಮತ್ತು ಆಟೋ ಸವಾರರು ಸಂಚಾರ ಮಾಡುವುದೇ ಕಷ್ಟವಾಗಿದೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ರಸ್ತೆಯನ್ನು ದುರಸ್ತಿ ಪಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಕರವೇ ಕನ್ನಡ ಸೇನೆ ತಾಲೂಕು ಅಧ್ಯಕ್ಷ ಪಿ. ಮುತ್ತಯ್ಯ ಜಾಗನೂರಹಟ್ಟಿ ಆಗ್ರಹಿಸಿದ್ದಾರೆ.

ಇದೇ ಸಂದರ್ಭದಲ್ಲಿ ಗ್ರಾಮಸ್ಥರಾದ ನಿಜಲಿಂಗಪ್ಪ, ನಾಗೇಂದ್ರಪ್ಪ, ಇದ್ದರು

About The Author

Namma Challakere Local News
error: Content is protected !!