ಚಳ್ಳಕೆರೆ : ಬಯಲು ಸೀಮೆಯಲ್ಲಿ ಮಳೆರಾಯನ ಆರ್ಭಟಕ್ಕೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತವಾಗಿದೆ.

ಹೌದು ಚಳ್ಳಕೆರೆ ನಗರದ ಬಳ್ಳಾರಿ ರಸ್ತೆಯಲ್ಲಿ ಇರುವ ಅಭಿಷೇಕ ನಗರದ ನಿವಾಸಿಗಳ ಮನೆಗಳಿಗೆ ನೀರು ನುಗ್ಗಿ ಧವಸ ಧಾನ್ಯಗಳು ನೀರಿನಲ್ಲಿ ಮುಳುಗಿ ಹೋಗಿವೆ.

ಇನ್ನೂ ಸ್ಥಳೀಯ ಶಾಸಕ ಟಿ.ರಘುಮೂರ್ತಿ ಸೂಚನೆಯಂತೆ ರಾತ್ರೋ ರಾತ್ರಿ ಸಂತ್ರಸ್ತರ ಸ್ಥಳಕ್ಕೆ
ದೌಡಾಯಿಸಿದ ನಗರಸಭೆ ಅಧಿಕಾರಿಗಳು, ಹಾಗೂ ಅಧ್ಯಕ್ಷರು, ನೀರು ನುಗ್ಗಿ ಹಾನಿಯಾದ ಮನೆಗಳನ್ನು ಪರೀಶಿಲನೆ ನಡೆಸಿ ರಾತ್ರಿವೇಳೆಯೆ ಹಾನಿಯಾದ ಮನೆಗಳಿಂದ ತಾತ್ಕಾಲಿಕವಾಗಿ ಸಮುದಾಯದ ಭವನದ ಆಶ್ರಯ ಕೇಂದ್ರಕ್ಕೆ ರವಾನೆ ಮಾಡಿಸಿದ್ದಾರೆ.

ಶಾಲಾ ಮಕ್ಕಳು, ವಯೋವೃದ್ದರ ಪಾಡು ಹೇಳತಿರಾಗಿದೆ, ಕತ್ತಲು ಕವಿದ ನಗರದಲ್ಲಿ ಮಳೆರಾಯನ ಆರ್ಭಟದ ಮಧ್ಯೆ ಜನ ವಸತಿ ಕೇಂದ್ರಕ್ಕೆ ರಾತ್ರಿಯಲ್ಲ ನಿದ್ದೆಯಿಲ್ಲದೆ ಆಶ್ರಯ ಪಡೆಯುವಂತಾಗಿತ್ತು ಎಂದು ನಿರಾಶ್ರಿತರ ಮಾತಾಗಿತ್ತು.

ಮುಂಜಾನೆಯೇ ಶಾಸಕರ ಸೂಚನೆಯಂತೆ ಸ್ಥಳಕ್ಕೆ ಬೇಟಿ‌ನೀಡಿದ ತಹಶಿಲ್ದಾರ್ ರೇಹಾನ್ ಪಾಷ, ಗ್ರಾಮ ಲೆಕ್ಕಾಧಿಕಾರಿ ಪ್ರಕಾಶ್, ಸಂತ್ರಸ್ತರ ಬಳಿ ಸಮಾಲೋಚನೆ ನಡೆಸಿ ನೀರು ನುಗ್ಗಿದ ಏಳು ಮನೆಗಳನ್ನು ಪರೀಶಿಲನೆ ನಡೆಸಿದ್ದಾರೆ.

ಇಲ್ಲಿ ವಾಸವಾಗಿರುವ ಸುಮಾರು ಕುಟುಂಬಗಳು ಮೇಲ್ಜಾತಿಯ ದೌರ್ಜನ್ಯ ಪ್ರಕರಣದಲ್ಲಿ ಬೂದಿಹಳ್ಳಿ ಗ್ರಾಮ ತೊರೆದು ನಗರ ಸೇರಿದ ದಲಿತ ಸಮುದಾಯದ ಹಲವು ಕುಟುಂಬಗಳು ಕೆಲದಿನಗಳ ಹಿಂದೆ ನಗರದ ವೆಂಕಟೇಶ್ವರ ನಗರದ ಪಕ್ಕದಲ್ಲಿ ಇರುವ ಕೆರೆಯಂಗಳದಲ್ಲಿ ಬೀಡುಬಿಟ್ಟಿದ್ದರು, ನಂತರದ ದಿನಗಳಲ್ಲಿ ಕೆರೆತುಂಬಿ ಸಂತ್ರಸ್ತರಾದ ಹಲವು ಕುಟುಂಬಗಳಿಗೆ ಆಶ್ರಯ ನೀಡಿದ ಸ್ಥಳೀಯ ಶಾಸಕ ಟಿ.ರಘುಮೂರ್ತಿ , ಅಭಿಷೇಕ್ ನಗರದಲ್ಲಿ ಲಿಡ್ಕರ್ ವತಿಯಿಂದ ನಿವೇಶನ ನೀಡಿ, ವಸತಿ ಕಟ್ಟಿಸಿದ್ದಾರೆ ಆದರೆ ಲಿಡ್ಕರ್ ಅಧಿಕಾರಿಗಳು ತಾತ್ಸರ ಮನೋಭಾವದಿಂದ ಕಳೆದ ಹಲವು ವರ್ಷಗಳಾದರೂ ಸಂತರಸ್ತರಿಗೆ ಸೂರು ನೀಡುವಲ್ಲಿ ವಿಫಲವಾಗಿದ್ದಾರೆ.

ಸಂತ್ರಸ್ತರಿಗೆ ತಪ್ಪದ ಪಿಕಲಾಟ :

ದೌರ್ಜನ್ಯಕ್ಕೆ ಒಳಗಾದ ಸುಮಾರು ಸಂತ್ರಸ್ತರ ಕುಟುಂಬಗಳ ಆಶ್ರಯಕ್ಕೆ ನಿಂತ ಸ್ಥಳೀಯ ಶಾಸಕರು ಸ್ವ ಹಿತಾಸಕ್ತಿಯಿಂದ ಲಿಡ್ಕರ್ ಮೂಲಕ ವಸತಿ ಕಲ್ಪಿಸಲು ಅನುದಾನ ಹೊದಗಿಸಿ, ಸಂತ್ರಸ್ತರ ನೆರವಿಗೆ ನಿಂತರು, ಆದರೆ 175 ಮನೆಗಳಿಗೆ ಮಂದಗತಿಯ ಕಾಮಗಾರಿಯೇ ಕಾರಣವಾಗಿದೆ ಇನ್ನಾದರೂ ಶಾಸಕ ಟಿ.ರಘುಮೂರ್ತಿ ಕನಸಿನಂತೆ ಸಂತ್ರಸ್ತರಿಗೆ ಲಿಡ್ಕರ್ ಮೂಲಕ ಮನೆಗಳು ತುರ್ತಾಗಿ ಲಭ್ಯವಾಗುತ್ತವೆ ಎಂಬುದು ಕಾದುನೋಡಬೇಕಿದೆ‌.v

About The Author

Namma Challakere Local News
error: Content is protected !!