ಚಳ್ಳಕೆರೆ :
ಹಾಲು ಉತ್ಪಾದಕರ ಸಂಘಗಳು ಹಾಲಿನ ಉತ್ಪಾದನೆಯ ವಹಿವಾಟಿನಿಂದ ಲಾಭದಲ್ಲಿರುವುದು ಬಹಳ ಸಂತೋಷದ ವಿಷಯವಾಗಿದೆ, ಎಂದು ಶಿಮುಲ್ ಜಿಲ್ಲಾ ನಿರ್ದೇಶಕರಾದ ಬಿ.ಸಿ. ಸಂಜೀವ್ ಮೂರ್ತಿ ಹೇಳಿದರು.

ಅವರು ತಾಲೂಕಿನ ಹೆಗ್ಗೆರೆ ಗ್ರಾಮ ಹಾಗೂ ಸೋಮಗದ್ದು ಗ್ರಾಮಗಳಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ 2024- 25ರ ವಾರ್ಷಿಕ ಸಾಮಾನ್ಯ ಸಭೆಯನ್ನು ಹೆಗ್ಗೆರೆ ಸಂಘದ ಆವರಣದಲ್ಲಿ ಸಂಘದ ಅಧ್ಯಕ್ಷರಾದ ವಿ. ರಾಘವೇಂದ್ರ ಹಾಗೂ ಸೋಮಗುದ್ದು ಸಂಘದ ಆವರಣದಲ್ಲಿ ಸಂಘದ ಅಧ್ಯಕ್ಷ ಯುತ ಎಸ್.ಶೆಟ್ಟಪ್ಪ ರವರುಗಳ ಘನ
ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿತ್ತು, ಈ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹೈನುಗಾರಿಕೆ ಮೂಲಕ ರೈತ ತಮ್ಮ‌ ಕುಟುಬಂದ ನಿರ್ವಹಣೆ ಹಾಗೂ ಜೀವನ ಅಸನುಮಾಡಿಕೊಳ್ಳಬಹುದು ಎಂದರು.

ಈ ಸಂದರ್ಭದಲ್ಲಿ ಚಳ್ಳಕೆರೆ ತಾಲ್ಲೂಕು ಉಪ ವಿವಾಗಾಧಿಕಾರಿಗಳಾದ ಎಂ. ಪುಟ್ಟರಾಜರವರು ಹಾಗೂ ಮಾರ್ಗ ವಿಸ್ತರಣಾಧಿಕಾರಿಗಳಾದ ಎಸ್. ನಯಾಜ್ ಬೇಗ್ ರವರು ವಾರ್ಷಿಕ ವಹಿವಾಟಿನ ಸಮಗ್ರ ಮಾಹಿತಿಯನ್ನು ಸಭೆಗೆ ನೀಡಿದರು.

ಇದೆ ಸಂದರ್ಭದಲ್ಲಿ ಹಾಲು ಉತ್ಪಾದಕರ ಸೋಮಗದ್ದು ಸಂಘದಲಿ ಹಾಗೂ ಹೆಗ್ಗೆರೆ ಸಂಘದ ಅತಿ ಹೆಚ್ಚು ಹಾಲು ಹಾಕಿದ ಉತ್ಪಾದಕರಿಗೆ ಸಂಘದ ಪರವಾಗಿ ನಿರ್ದೇಶಕರು ಬಹುಮಾನವನ್ನು ವಿತರಿಸಿದರು . ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಸರ್ವ ಸದಸ್ಯರು ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು

About The Author

Namma Challakere Local News
error: Content is protected !!