ಚಳ್ಳಕೆರೆ : ಸಂಘದ ಸರ್ವ ಸದಸ್ಯರು ಸಂಘದ ಏಳಿಗೆಗೆ ಶ್ರಮವಹಿಸಬೇಕು ಎಂದು ನಿವೃತ್ತ ಮುಖ್ಯ ಅಧಿಕ್ಷಿಕರು ಪರಪ್ಪನ ಅಗ್ರಹಾರ ಹಾಗೂ ರಾಷ್ಟ್ರಪತಿ ಪದಕ ಪ್ರಸ್ತುತರಾದ ಹೆಚ್ .ವಿ.ವಿರೇಂದಸಿಂಹ ಹೇಳಿದರು..

ಚಳ್ಳಕೆರೆ ತಾಲ್ಲೂಕಿನ ಕಾಪರಹಳ್ಳಿ ಗ್ರಾಮದ ಸ್ವಯಂಸೇವಾ ಸಂಘದ ಕಚೇರಿ ಆವರಣದಲ್ಲಿ ಇಂದು ನಡೆದ ಶ್ರೀ ಕೆಂಚಾಂಬ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಹಾಗೂ
ಚಿಂತನ ಮಂಥನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿ,

ಮಹಿಳಾ ಸಂಘವು ಮೂರು ತಾಲ್ಲೂಕಿನ ಸಂಘದ ಮಹಿಳೆಯರಿಗೆ ಟೈಲರಿಂಗ್ ಮೋಟರ್ ವೈಂಡಿಂಗ್ ಎಲೆಕ್ಟ್ರಿಷಿಯನ್ ಉಚಿತವಾಗಿ ತರಬೇತಿ ನೀಡಿ 5.ಸಾವಿರ ಹೊಲಿಗೆ ಯಂತ್ರಗಳನ್ನ ನೀಡಿಲಾಗಿದೆ .
ಸಂಘದ ನಿರ್ಗತಿಕ ಮಹಿಳೆಯರಿಗೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಇವರ ವತಿಯಿಂದ ವಸತಿ ಗೃಹಗಳನ್ನ ನಿರ್ಮಿಸಿ ಕೊಡಲಾಗಿದೆ. ಪಶುಸಂಗೋಪನ ಇಲಾಖೆ ವತಿಯಿಂದ ಹಸುಗಳನ್ನು ನೀಡಲಾಗಿದ್ದು ಹಾಲು ಉತ್ಪಾದನೆಯಿಂದ ಮಹಿಳೆ ಆರ್ಥಿಕ ಮಟ್ಡವನ್ನ ಸುಧಾರಿಸಿಕೊಳ್ಳುತ್ತಿದ್ದಾರೆ.ಹಾಗೂ ಮಹಿಳೆಯರಿಗೆ ಸಂಘದ ಸಾಲ ಸೌಲಭ್ಯ ನೀಡಲಾಗುತ್ತಿದ್ದು ಇದರಿಂದ ಮಹಿಳೆಯರು ಸ್ವಾವಲಂಬಿ ಬದುಕಕಟ್ಟಿಕೊಳ್ಳುಲು ಸಾಧ್ಯವಾಗಿದೆ. ಸಂಘದ ಕಾರ್ಯದರ್ಶಿ ಶ್ರೀನಿವಾಸ್ ಇವರ ಸಹಕಾರದಿಂದ ಸಂಘ ಉತ್ತಮವಾಗಿ ಬೆಳವಣಿಗೆ ಕಾಣುತ್ತಿದೆ . ಕಾರ್ಯದರ್ಶಿಗಳ ಕನಸು ನನಸಾಗಲಿ ಎಂದು ಶುಭ ಹಾರೈಸಿದರು ..

ಕಾರ್ಯದರ್ಶಿ ಶ್ರೀನಿವಾಸ್ ಮಾತನಾಡಿ. ಮಹಿಳೆಯರ ಆರ್ಥಿಕ ಸಬಲತೆಗೆ ನಮ್ಮ ಸಂಘ ಸಹಕಾರ ನೀಡುತ್ತಿದ್ದು ಸರ್ವ ಸದಸ್ಯರು ಸಭೆಗಳಿಗೆ ತಪ್ಪದೇ ಹಾಜರಾಗಬೇಕು ಈಗಾಗಲೇ ನೀಡಿರುವ ಸಾಲವನ್ನು ಹಂತಹ ಹಂತವಾಗಿ ಮರ ಪಾವತಿ ಮಾಡಬೇಕು ಇದರಿಂದ ಬೇರೆ ಸದಸ್ಯರಿಗೆ ಸಾಲ ಕೊಡಲು ಸಹಕಾರವಾಗುತ್ತದೆ ಎಂದರು..

ಈ ಸಮಯದಲ್ಲಿ ಸಂಘದ ಅಧ್ಯಕ್ಷರಾದ ಆರ್‌ಎನ್ ರತ್ನನಾಯಕಿ, ‌ಮಾತನಾಡಿದರು.
ಈ ಸಭೆಯಲ್ಲಿ
ಸಂಘದ ಅಧ್ಯಕ್ಷೆ ಕರಿಯಮ್ಮ,ಸದಸ್ಯರಾದ ಟಿ.ಪಿ.ರವಿಕುಮಾರ ಅರಸು,ಎಂ.ಇಕ್ಬಾಲ್, ಪಂಕಜ, ಚಂದ್ರಮ್ಮ,ಶಂಕರ್ , ಸ್ವಪ್ನ ನಾಗೇಂದ್ರಪ್ಪ ಮಹಾಲಿಂಗಪ್ಪ ನಾಗರಾಜ್.ಭೂತರಾ ದೇವರಾಜ್ ಹೇಮಲತ ಸೇರಿದಂತೆ ಸರ್ವ ಸದಸ್ಯರು ಇದ್ದರು….

About The Author

Namma Challakere Local News
error: Content is protected !!