ಗಣೇಶ್ ಚರ್ತುಥಿಗೆ ಪರವಾನಿಗೆ ಕಡ್ಡಾಯ : ಖಡಕ್ ಸೂಚನೆ ನೀಡಿದ ಡಿವೈಎಸ್‌ಪಿ ಬಿಟಿ.ರಾಜಣ್ಣ

ಚಳ್ಳಕೆರೆ : ಈ ಬಾರಿ ಗೌರಿ ಗಣೇಶ ಚರ್ತುಥಿ ಹಾಗೂ ಈದ್‌ಮಿಲಾದ್ ಹಬ್ಬ ಎಂದಿನಂತೆ ಬಂದಿರುವುದರಿಂದ ಹಿಂದೂ ಮುಸ್ಲಿಂ ಸ್ನೇಹಮಯದಿಂದ ವರ್ತಿಸಬೇಕು, ಅದರಂತೆ ತಾಲೂಕಾದ್ಯಂತ ಗೌರಿ ಗಣೇಶ ಹಬ್ಬವನ್ನು ಶಾಂತಿ-ಸುವ್ಯವಸ್ಥೆಯಿಂದ ಆಚರಿಸಬೇಕು ಎಂದು ಡಿವೈಎಸ್ಪಿ ರಾಜಣ್ಣ ಹೇಳಿದರು.

ಅವರು ನಗರದ ತಾಲೂಕು ಕಛೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ, ಪೋಲಿಸ್ ಇಲಾಖೆವತಿಯಿಂದ ಈದ್ ಮಿಲಾದ್ ಹಾಗೂ ಗಣೇಶೋತ್ಸವ ಹಬ್ಬಗಳ ಆಚರಣೆ ಅಂಗವಾಗಿ ಸಾರ್ವಜನಿಕರಿಗೆ, ವಿವಿಧ ಸಂಘ ಸಂಸ್ಥೆ ಹಾಗೂ ಮುಸ್ಲಿಮ್ ಸಮುದಾಯದ ಮುಖಂಡರಿಗೆ ಆಯೋಜಿಸಿದ್ದ ಶಾಂತಿ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಗಣೇಶ ಪ್ರತಿಷ್ಠಾಪಿಸುವ ಸಂಘವು ಪೊಲೀಸ್ ಠಾಣೆಯಲ್ಲಿ ಕಡ್ಡಾಯವಾಗಿ ಪರವಾನಿಗೆ ಪಡೆಯಬೇಕು, ಗಣೇಶ ಕುರಿಸುವ ಸ್ಥಳವನ್ನು ಪೊಲೀಸ್ ಸಿಬ್ಬಂದಿಗೆ ತೋರಿಸಬೇಕು, ಹಾಗೂ ಬೆಸ್ಕಾಂ ಇಲಾಖೆ, ನಗರಸಭೆ, ಗ್ರಾಪಂ. ಹಾಗೂ ಪರಿಸರ ನೈರ್ಮಲ್ಯ ಇಲಾಖೆಯಿಂದ ಪರವಾನಿಗೆ ಪಡೆದ ನಂತರ ಒಪ್ಪಂದ ಪ್ರಕಾರ ಗಣೇಶ ಕುರಿಸಿ ವಿರ್ಸಜನೆ ಮಾಡಬೇಕು, ಸಮಾಜದಲ್ಲಿ ಎಲ್ಲರೂ ಶಾಂತಿ, ಸೌಹಾರ್ದತೆ ಹಾಗೂ ಸಾಮರಸ್ಯವನ್ನು ಕಾಪಾಡಬೇಕು. ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಹಾಗೂ ವಿಸರ್ಜನೆಯ ವೇಳೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ತಾಲೂಕಿನಲ್ಲಿ ಹಿಂದೂ ಹಾಗೂ ಮುಸಲ್ಮಾನ್ ಬಾಂಧವರು ಭಾವೈಕ್ಯತೆಯಿಂದ ಜೀವನ ನಡೆಸುತ್ತಿದ್ದು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಇದುವರೆಗೂ ಯಾವುದೇ ಅಹಿತಕರ ಘಟನೆಗಳು ನಡೆದಿಲ್ ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳನ್ನು ಎರಡು ಸಮುದಾಯದವರು ತಮ್ಮದೇ ಆದ ಸಂಪ್ರದಾಯಗಳಲ್ಲಿ ಆಚರಿಸುತ್ತಾರೆ ಎಂದರು.

ಇನ್ನೂ ಇನ್ಸ್ಪೆಕ್ಟರ್ ಕೆ.ಕುಮಾರ್ ಮಾತನಾಡಿ, ಪೊಲೀಸ್ ಇಲಾಕೆ ಹಾಗೂ ನಗರಸಭೆ ಸೂಚಿಸಿದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು, ನಗರದಲ್ಲಿ ಹಬ್ಬಗಳ ದಿನದಂದು ಶಾಂತಿ ಕಾಪಾಡುವುದು ಸಾರ್ವಜನಿಕರ ಕರ್ತವ್ಯವಾಗಿದ್ದು ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಕಾರ್ಯವನ್ನು ಕೈಗೊಂಡಿರುತ್ತದೆ ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಿ ಇಲಾಖೆಯ ಮಾರ್ಗದರ್ಶನದಂತೆ ನಿಯಮಗಳನ್ನು ಪಾಲಿಸಿಕೊಂಡು ಹಬ್ಬಗಳನ್ನು ಆಚರಿಸಬೇಕು, ಪೊಲೀಸ್ ಇಲಾಖೆ ಇರುವುದು ಸಾರ್ವಜನಿಕರ ರಕ್ಷಣೆಗಾಗಿ ಸರ್ಕಾರದ ನಿಯಮಗಳನ್ನು ಪಾಲಿಸುವುದು ಇಲಾಖೆ ಜವಾಬ್ದಾರಿಯಾಗಿರುತ್ತದೆ ಗಣೇಶ ಹಬ್ಬದಂದು ಪೊಲೀಸ್ ನಗರ ಸಭೆ ಬೆಸ್ಕಾಂ ಕಂದಾಯ ಇಲಾಖೆಗಳ ಅನುಮತಿ ಪಡೆದು ಪರಿಸರ ಸ್ನೇಹಿ ಮಣ್ಣಿನ ಗಣೇಶವನ್ನು ಪ್ರತಿಷ್ಠಾಪಿಸಬೇಕು ಸಂಜೆ 7ರಿಂದ ರಾತ್ರಿ 10ವರೆಗೆ ಮಾತ್ರ ಮನರಂಜನೆ ಕಾರ್ಯಕ್ರಮಗಳಿಗೆ ಅವಕಾಶವಿದ್ದು ಗಣೇಶ ವಿಸರ್ಜನೆಯ ದಿನ ಮೆರವಣಿಗೆ ಸಾಗುವ ಮಾರ್ಗಗಳನ್ನು ಪೊಲೀಸ್ ಇಲಾಖೆಗೆ ತಿಳಿಸಬೇಕು ನಿಯಮಗಳನ್ನು ಉಲ್ಲಂಘಿಸಿದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಈದ್ ಮಿಲಾದ್ ಹಬ್ಬದ ವೇಳೆ ಮುಸ್ಲಿಂ ಬಾಂಧವರು ಶಾಂತಿಯನ್ನು ಕಾಪಾಡಿ ತಮ್ಮ ಆಚರಣೆಗಳನ್ನು ಕೈಗೊಳ್ಳಬೇಕು ಯಾವುದೇ ಅಹಿತಕರ ಘಟನೆ ನಡೆಯದಂತೆ ಸಾರ್ವಜನಿಕರು ಸಹಕರಿಸಬೇಕು ಎಂದರು.

ಪಿಎಸ್ಐ ಶಿವರಾಜ್ ಮಾತನಾಡಿ ರಸ್ತೆಗೆ ಅಡ್ಡವಾಗಿ ಪ್ಲೆಕ್ಸ್ ಬಂಟಿಗ್ಸ್ ಕಟ್ಟಬಾರದು ನಿಯಮ ಬಾಹಿರವಾಗಿ ಕಟ್ಟಿದರೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ, ನಗರಸಭೆ ಪರವಾನಗೆ ಕಡ್ಡಾಯವಾಗಿರುತ್ತದೆ, ಅನಧಿಕೃತ ಫ್ಲೆಕ್ಸ್ಗಳಿಗೆ ದಂಡ ವಿಧಿಸಲಾಗುವುದು ಫ್ಲೆಕ್ಸ್ಗಳಿಗೆ ಹಾನಿ ಉಂಟಾದಲ್ಲಿ ನೀವೆ ಜವಾಬ್ದಾರಿ, ಫ್ಲೆಕ್ಸ್ ಗಳನ್ನು ಹಾಕುವವರೆ ಉಸ್ತೂವಾರಿ ನೋಡಿಕೊಳ್ಳಬೇಕು, ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ನಗರಸಭೆ ಅನುಮತಿ ಕಡ್ಡಾಯವಾಗಿರುವುದರಿಂದ ಕಚೇರಿಯಲ್ಲಿ ಬಂದು ಅನುಮತಿ ಪಡೆಯಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಹಶಿಲ್ದಾರ್ ರೇಹಾನ್ ಪಾಷ,
ತಳಕು ವೃತ ನಿರೀಕ್ಷಕ ಹನುಮಂತಪ್ಪ ಶಿರೆಹಳ್ಳಿ .ಪಿಎಸ್ಐ ಶಿವರಾಜ್, ದರೇಪ್ಪ ಬಾಳಪ್ಪ ದೊಡ್ಡಮನಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಮಲ್ಲಿಕಾರ್ಜುನ, ಅಗ್ನಿಶಾಮಕ ದಳದ ಅಧಿಕಾರಿ ಬಹುಗುಣ, ಲೋಕಪಯೋಗಿ ಇಲಾಖೆ ತಾಂತ್ರಿಕ ಅಧಿಕಾರಿ ಸಿದ್ದಪ್ಪ, ಪೌರಾಯುಕ್ತ ಜಗರೆಡ್ಡಿ, ಬೆಸ್ಕಾಂ ಅಧಿಕಾರಿ ದೇವರಾಜ್,
ಗಾಂಧಿನಗರದ ಡಿ.ಚಂದ್ರು. ಕೃಷ್ಣ, ಡಿಎಸ್‌ಎಸ್.ವಿಜಯ್ ಕುಮಾರ್, ಹೊನ್ನುರಸ್ವಾಮಿ, ಸೇರಿದಂತೆ ಗಣೇಶ ಸಂಘಗಳ ಸದಸ್ಯರು ಮುಸ್ಲಿಂ ಮುಖಂಡರು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!