ಚಿತ್ರದುರ್ಗ: ನಗರದ ಕಾಲೇಜು ವಿದ್ಯಾರ್ಥಿನಿ ಮೃತ ದೇಹ ಕೊಲೆಯಾದ
ಸ್ಥಿತಿಯಲ್ಲಿ ಪತ್ತೆಯಾಗಿದೆ.

ನಗರದ ಹೊರವಲಯದ ಗೋನೂರು ಬ್ರಿಡ್ಜ್ ಬಳಿ (ಹೊಸ ಹೈವೇ)
ಖಾಸಗಿ ಜಮೀನಿನಲ್ಲಿ ವಿದ್ಯಾರ್ಥಿನಿಯ ಮೃತ ದೇಹ ಪತ್ತೆಯಾಗಿದೆ.

ಕೊಲೆ ಮಾಡಿ ಪೆಟ್ರೋಲ್ ಹಾಕಿ ಸುಟ್ಟಿರುವ ಶಂಕೆಯಿದೆ. ಮೃತ
ದೇಹವನ್ನು ಜಿಲ್ಲಾ ಆಸ್ಪತ್ರೆಗೆ ತರಲಾಗಿದೆ.

ಮೃತ ವಿದ್ಯಾರ್ಥಿನಿ ಹಿರಿಯೂರು ತಾಲೂಕಿನ ಕೋವೆರಹಟ್ಟಿ ಮೂಲದ
ವರ್ಷಿತಾ ಎಂದು ಗುರುತಿಸಿದ್ದು, ಪೋಷಕರ ಆಕ್ರಂಧನ ಮುಗಿಲು
ಮುಟ್ಟಿತ್ತು.

ಚಿತ್ರದುರ್ಗದಲ್ಲಿ ಹಾಸ್ಟೆಲ್ ನಲ್ಲಿದ್ದು, ಸರ್ಕಾರಿ ಮಹಿಳಾ ಪ್ರಥಮ ದರ್ಜೆ
ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿನಿ ಅರೆಬರೆ ಸುಟ್ಟಿರುವ
ಸ್ಥಿತಿಯಲ್ಲಿ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ
ಕಾರಣವಾಗಿದೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ನೀಡಿ
ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ
ದಾಖಲೆ ಕಲೆಹಾಕಿದ್ದಾರೆ. ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆ
ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಎಬಿವಿಪಿಯಿಂದ ಕಾಲೇಜು ಬಂದ್ ಕರೆ:
ವಿದ್ಯಾರ್ಥಿನಿಯ ಕೊಲೆ ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ
ಪರಿಷತ್‌ (ABVP) ಚಿತ್ರದುರ್ಗ ನಗರದ ಎಲ್ಲ ಕಾಲೇಜುಗಳ ಬಂದ್‌
ಕರೆಕೊಟ್ಟಿದೆ. ನಂತರ ಡಿಸಿ ಕಚೇರಿ ಬಳಿ ಬೃಹತ್‌ ಪ್ರತಿಭಟನೆ
ಹಮ್ಮಿಕೊಳ್ಳಲಾಗಿದೆ ಎಂದು ವಿಭಾಗ ಸಂಚಾಲಕ ಗೋಪಿ ತಿಳಿಸಿದ್ದಾರೆ.

ಇನ್ನೂ ಪೋಲಿಸ್ ರು ತನಿಖೆ ಚುರುಕುಗೊಳಿಸಿ ಚೇತನ್ ಎಂಬ ವ್ಯಕ್ತಿಯನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.

About The Author

Namma Challakere Local News
error: Content is protected !!