ಪೋಷಕರು ಶಿಕ್ಷಕರಿಗೆ ಸಹಕಾರಿ ನೀಡಿದರೆ ಮಾತ್ರ ಮಕ್ಕಳ ಭವಿಷ್ಯ ರೂಪಿಸಲು ಸಾಧ್ಯ ಪಿ. ಎನ್. ಮುತ್ತಯ್ಯ ಪೋಷಕರಿಗೆ ಕಿವಿ ಮಾತು.
ನಾಯಕನಹಟ್ಟಿ:: ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಶಿಕ್ಷಕರಿಗೆ ಸಹಕಾರ ನೀಡಬೇಕು ಎಂದು ಗ್ರಾ.ಪಂ. ಸದಸ್ಯ ಮಾಜಿ ಅಧ್ಯಕ್ಷ ಪಿ.ಎನ್. ಮುತ್ತಯ್ಯ ಹೇಳಿದರು.
ಶುಕ್ರವಾರ ಸಮೀಪದ ನಲಗೇತನಹಟ್ಟಿ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಪೋಷಕರ ಶಿಕ್ಷಕರ ಮಹಾಸಭೆ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಚಾಲನೆ ನೀಡಿ ಮಾತನಾಡಿದ ಅವರು. ಪೋಷಕರು ಮಕ್ಕಳಿಗೆ ಆಸ್ತಿ ಮಾಡುವ ಕಾಲವೊಂದಿತ್ತು ಇಂದು ಕಾಲ ಬದಲಾಗಿದೆ ಆಸ್ತಿಗಿಂತ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು ವರೆತು ಆಸ್ತಿಯನ್ನಲ್ಲ ಸರ್ಕಾರ ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ ಅದರ ಸದುಪಯೋಗ ಪಡೆದುಕೊಳ್ಳಬೇಕು ಮುಂಬರುವ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ಶಿಕ್ಷಕರಿಗೆ ಮತ್ತು ಪೋಷಕರಿಗೆ ಹಾಗೂ ಗ್ರಾಮಕ್ಕೆ ಕೀರ್ತಿ ತರುವ ಹಾಗೆ ಉತ್ತಮ ಫಲಿತಾಂಶವನ್ನು ತರಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಈಗಲೂ ಬೋರಯ್ಯ, ಸದಸ್ಯೆ ಬೋರಮ್ಮ ನಿಂಗರಾಜ್, ಪ್ರೌಢಶಾಲಾ ಮುಖ್ಯ ಶಿಕ್ಷಕ ಬಿ. ವಿ.ನಾಥ್, ಪಿಡಿಒ ರಾಜಣ್ಣ, ಹಾಸ್ಟೆಲ್ ಮೇಲ್ವಿಚಾರಕ ಮಂಜುನಾಥ್, ಶಿಕ್ಷಕರಾದ ಸತೀಶ್ ಬಾಬು, ಅಬ್ದುಲ್ ಮುಜೀಬ್, ದೈಹಿಕ ಶಿಕ್ಷಕ ತಿಪ್ಪೇಸ್ವಾಮಿ, ಬೋಧಕ ಹರೀಶ್, ಶಿಕ್ಷಕಿಯರಾದ ಜ್ಯೋತಿ, ಸಂಜೀವಿನಿ, ಜಯ ಚಿತ್ರ, ಸೇರಿದಂತೆ ಶಾಲೆಯ ವಿದ್ಯಾರ್ಥಿನಿಯರು ಗ್ರಾಮಸ್ಥರು ಇದ್ದರು

