ರೇಖಲಗೆರೆ ಗ್ರಾಮದಲ್ಲಿ ಪ್ರತಿಯೊಬ್ಬರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ. ಆರ್ ಪ್ರಕಾಶ್.
ನಾಯಕನಹಟ್ಟಿ:: ಸಮೀಪದ ರೇಖಲಗೆರೆ ಗ್ರಾಮದ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಚಳ್ಳಕೆರೆ
ಪೋಷಕರ -ಹಾಗೂ ಶಿಕ್ಷಕರ ಮಹಾಸಭೆ ಮತ್ತು ಮಕ್ಕಳ ದಿನಾಚರಣೆ 2025 ರಂದು ಶಾಲೆಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು. ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳಿಗೆ ಸರ್ಕಾರ ಅನೇಕ ಮೂಲಭೂತ ಸೌಲಭ್ಯಗಳನ್ನು ನೀಡಿದೆ ಪ್ರತಿಯೊಬ್ಬರು ಸೌಲಭ್ಯವನ್ನು ಪಡೆದುಕೊಂಡು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ಎಸ್ ಡಿ ಎಂ ಸಿ ಅಧ್ಯಕ್ಷ ಆರ್. ಪ್ರಕಾಶ್ ಪೋಷಕರಲ್ಲಿ ಮನವಿ ಮಾಡಿದರು.
ಇದೆ ವೇಳೆ ಮಾಜಿ ಗ್ರಾಮ ಪಂಚಾಯತಿ ಸದಸ್ಯ ಎ. ಟಿ. ಅಶೋಕ್ ಮಾತನಾಡಿದರು. ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಶಿಕ್ಷಕರೊಂದಿಗೆ ಪೋಷಕರ ಅತ್ಯಂತ ಅಗತ್ಯ ಆದ್ದರಿಂದ ಪೋಷಕರು ಶಿಕ್ಷಕರಿಗೆ ಪ್ರೋತ್ಸಾಹ ನೀಡಿದರೆ ತಮ್ಮ ಮಕ್ಕಳ ಭವಿಷ್ಯ ಉತ್ತಮವಾಗಿಸಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ನೇತ್ರಾವತಿ ವಿಶ್ವನಾಥ್ ಮತ್ತು ಸದಸ್ಯರು ಹಾಗೂ ಶಾಲೆಯ ಮುಖ್ಯ ಶಿಕ್ಷಕ ಎಂ.ಬಿ. ತಿಪ್ಪೇಶ್, ಸಹ ಶಿಕ್ಷಕಿ ಎಂ.ಎಸ್. ಉಮಾದೇವಿ,ಎ. ಸ್ವಾತಿ, ಸೇರಿದಂತೆ ಶಾಲೆಯ ಮಕ್ಕಳು ಪೋಷಕರು ಭಾಗವಹಿಸಿದ್ದರು

