ಚಳ್ಳಕೆರೆ :
ಹಿರಿಯೂರು: ಹಲ್ಲೆ ಆರೋಪಿಗಳನ್ನು ಬಂಧಿಸಿ ರೌಡಿ
ಶೀಟ್ ತೆರೆಯಿರಿ
ಹಿರಿಯೂರಿನ ಕೆ. ಆರ್. ಹಳ್ಳಿ ಗೇಟ್ ಬಳಿ ಡಾಬಾದಲ್ಲಿ ನಡೆದಿರುವ
ಹಲ್ಲೆ ಸಂಬಂಧ ಅರೋಪಿಗಳನ್ನು ಬಂಧಿಸಿ, ಅವರ ಮೇಲೆ
ರೌಡಿ ಶೀಟ್ ತೆರೆಯುವಂತೆ ಒತ್ತಾಯಿಸಿ ಡಿಸಿ ಹಾಗೂ ಎಸ್ಪಿಗೆ
ಬಂಜಾರ ಸಮಾಜದ ಅಧ್ಯಕ್ಷ ಎಂ. ಸತೀಶ್ ಕುಮಾರ್ ಗುರುವಾರ
ಆಗ್ರಹಿಸಿದ್ದಾರೆ.
20 ಕ್ಕೂ ಹೆಚ್ಚು ಜನರು ಹಲ್ಲೆ ಮಾಡಿದ್ದು,
ಉದ್ದೇಶಪೂರ್ವಕವಾಗಿ ಜಗಳ ತೆಗೆದು ಹಲ್ಲೆ ಮಾಡಿದ್ದಾರೆ.
ಇಂತವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.

