ಗೌರಸಮುದ್ರ ಮಾರಮ್ಮ ದೇವಿಯ ಆಶೀರ್ವಾದದಿಂದ ಶಾಸಕ ಎನ್,ವೈ, ಗೋಪಾಲಕೃಷ್ಣರವರಿಗೆ ಸಚಿವ ಸ್ಥಾನ ಸಿಗಲು ಪ್ರಾರ್ಥನೆ ವಕೀಲ ಹಿರೇಹಳ್ಳಿ ಮಲ್ಲೇಶ್.
ತಳಕು ಆ.27: ಚಿತ್ರದುರ್ಗ ಜಿಲ್ಲೆಯ ಮೊಳಕಾಲೂರು ವಿಧಾನಸಭಾ ಕ್ಷೇತ್ರದ ಶಾಸಕ ಎನ್.ವೈ. ಗೋಪಾಲಕೃಷ್ಣರವರಿಗೆ ಮುಂಬರುವ ಸಚಿವ ಸಂಪುಟದಲ್ಲಿ ಅವರಿಗೆ ಸಚಿವ ಸ್ಥಾನ ಸಿಗಲಿ ಎಂದು ಕೆ.ಪಿ.ಸಿ.ಸಿ.ರಾಜ್ಯ ಸಂಚಾಲಕರಾದ ಹೀರೇಹಳ್ಳಿ ಮಲ್ಲೇಶ್ ಗೌರಸಮುದ್ರ ಮಾರಮ್ಮ ದೇವಿಯಲ್ಲಿ ಪ್ರಾರ್ಥಿಸಿದರು.
ಚಳ್ಳಕೆರೆ ತಾಲೂಕಿನ ತಳಕು ಹೋಬಳಿಯ ಗೌರಸಮುದ್ರ ಗ್ರಾಮದಲ್ಲಿ ಮಂಗಳವಾರ ಗೌರಸಮುದ್ರ ಮಾರಮ್ಮ ದೇವಿ ಜಾತ್ರೋತ್ಸವದಲ್ಲಿ ಭಾಗಿಯಾಗಿ ಶ್ರೀ ಗೌರಸಮುದ್ರ ಮಾರಮ್ಮ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ
ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಶಾಸಕ ಎನ್ ವೈ ಗೋಪಾಲಕೃಷ್ಣ ರವರು ಗೌರಸಮುದ್ರ ಮಾರಮ್ಮ ದೇವಿಯ ಜಾತ್ರೆಗೆ ಬರುವಂತ ಭಕ್ತಾದಿಗಳಿಗೆ ತೊಂದರೆ ಆಗಬಾರದು ಎಂಬ ದೃಷ್ಟಿಯಿಂದ ಡಂಬಾರ್ ರಸ್ತೆ
ಮತ್ತು ಕುಡಿಯುವ ನೀರು ವ್ಯವಸ್ಥೆ ಕಲ್ಪಿಸಿದ್ದಾರೆ. ಪ್ರತಿ ವರ್ಷಕ್ಕೊಮ್ಮೆ ಗೌರ ಸಮುದ್ರ ಗ್ರಾಮದಲ್ಲಿ ಮಾರಮ್ಮ ದೇವಿ ಜಾತ್ರೆ ಸಡಗರ ಸಂಭ್ರಮದಿಂದ ಆಚರಿಸುತ್ತಾ ಬಂದಿರುತ್ತಾರೆ ಅಲ್ಲದೇ ಕರ್ನಾಟಕ ಮಾತ್ರ ಅಲ್ಲದೆ ಆಂಧ್ರಪ್ರದೇಶದಿಂದ ಭಕ್ತರು ಆಗಮಿಸುತ್ತಾರೆ ಎಂದರು.
ಕೊನೆಯ ಅಮಾವಾಸ್ಯೆ ನಂತರ ಬರುವ ಮಾರಮ್ಮ ದೇವಿ ಜಾತ್ರೆಗೆ ಈ ವರ್ಷ ಅಪಾರ ಭಕ್ತರು ಆಗಮಿಸಿದ್ದರು.
ಬೆಳಗಿನ ಜಾವದಿಂದಲೇ ಭಕ್ತರು ದೇವರ
ದರ್ಶನ ಪಡೆದು ಹೊರಟರು. ಈ ಬಾರಿ ಮಳೆ
ಬೆಳೆ ಸಮೃದ್ಧಿಯಾಗಿದ್ದು ಜನರ ಬದುಕು ಬೆಳಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು

