ಸಂಭ್ರಮದ ಬೆಸ್ಕಾಂ ಗಣೇಶ ಪ್ರತಿಷ್ಠಾಪನೆ ಶಾಖಾಧಿಕಾರಿ ಎನ್ ಬಿ ಬೋರಣ್ಣ.

ನಾಯಕನಹಟ್ಟಿ:: ಗಣೇಶನ ಆಶೀರ್ವಾದದಿಂದ ಈ ಭಾಗದ ರೈತರಿಗೆ ಉತ್ತಮ ಮಳೆ ಬೆಳೆ ಆಗಲಿ ಎಂದು ಪಟ್ಟಣದ ಬೆಸ್ಕಾಂ ಕಛೇರಿಯ ಶಾಕಾದಿಕಾರಿ ಎನ್ ಬಿ.ಬೋರಣ್ಣ ಹೇಳಿದರು.
ಬುಧವಾರ ಪಟ್ಟಣದ ಬೆಸ್ಕಾಂ ಕಚೇರಿಯಲ್ಲಿ ಬೆಸ್ಕಾಂ ಗಣೇಶ ಪ್ರತಿಷ್ಠಾಪನೆ ವಿಶೇಷ ಪೂಜೆ ಕಾರ್ಯದಲ್ಲಿ ಪಾಲ್ಗೊಂಡು ಮಾತನಾಡಿದರು. ಬೆಸ್ಕಾಂ ಕಚ್ಚಿದೆ ಸಿಬ್ಬಂದಿಗಳು ಪ್ರತಿ ವರ್ಷದಂತೆ ಸುಮಾರು ಐದನೇ ವರ್ಷದ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಇದು ಬೆಳಿಗ್ಗೆ 10:00 ಗಂಟೆಗೆ ಪ್ರತಿಷ್ಠಾಪಿಸಿ ವಿವಿಧ ಪೂಜಾ ಕಾರ್ಯಗಳನ್ನು ನೆರವೇರಿಸಿ ಸಂಜೆ 5:00 ವೇಳೆಗೆ ಸಮೀಪದ ಹಿರೇಕೆರೆಯಲ್ಲಿ ಶ್ರೀ ಗಣಪತಿಯನ್ನು ವಿಸರ್ಜನೆ ಮಾಡಲಾಗುತ್ತದೆ ಸಂಕಷ್ಟ ನಿವಾರಕ ವಿಘ್ನ ವಿನಾಯಕದ ಆಶೀರ್ವಾದ ನಾಡಿನ ಜನತೆಗೆ ಈ ಭಾಗದ ರೈತರಿಗೆ ಉತ್ತಮ ಮಳೆ ಬೆಳೆ ನೀಡಿ ಸಮೃದ್ಧಿಯಾಗಿ ಕಾಪಾಡಲಿ ಎಂದು ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ನಾಯಕನಹಟ್ಟಿ ಬೆಸ್ಕಾಂ ಕಚೇರಿಯ ಸಿಬ್ಬಂದಿಗಳಾದ ಜಿ.ಗೋವಿಂದಪ್ಪ, ರುದ್ರಮುನಿ, ಪಾಲಯ್ಯ, ಸಮಿವುಲ್ಲಾ ,ಶಿವರಾಜ್, ಅಜಯ್ ಕುಮಾರ್ ಅಭಿಷೇಕ್ ಜಗನ್ನಾಥ್ ಸೈಯದ್ ಇಮ್ರಾನ್ ಸೇರಿದಂತೆ ಸಿಬ್ಬಂದಿಗಳು ಇದ್ದರು

About The Author

Namma Challakere Local News
error: Content is protected !!