ಚಳ್ಳಕೆರೆ :
ಚಳ್ಳಕೆರೆ ತಾಲೂಕಿನ ಎಂ ಎಸ್ ಹಳ್ಳಿ ವಲಯದ ಎಂ ಎಸ್ ಹಳ್ಳಿ ಕಾರ್ಯಕ್ಷೇತ್ರದ ವಾತ್ಸಲ್ಯ ಸದಸ್ಯರಾದ ಗಂಗಮ್ಮನವರಿಗೆ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ವಾತ್ಸಲ್ಯ ಮನೆ ರಚನೆ ಕಾಮಗಾರಿಯ ಗುದ್ದಲಿ ಪೂಜೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಈ ಕಾರ್ಯಕ್ರಮವನ್ನು ತಾಲೂಕಿನ ಯೋಜನಾಧಿಕಾರಿಗಳು ಶಶಿಕಲಾ ನೆರವೇರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ವಿಷ್ಣುಮೂರ್ತಿ ರಾವ್, ಜನಜಾಗೃತಿ ವೇದಿಕೆ ಸದಸ್ಯರು ನಗರಸಭಾ ಸದಸ್ಯರಾದ ನೇತಾಜಿ ಪ್ರಸನ್ನ , ಮಧ್ಯವರ್ತಿನ ಶಿಬಿರದ ಉಪಾಧ್ಯಕ್ಷರಾದ ಎಂ ಏನ್ ಮೃತ್ಯುಂಜಯ , ಸಿ ಎಂ ರಮೇಶ್, ಐಟಿಐ ಪ್ರಿನ್ಸಿಪಾಲ್ ಮತ್ತು ಮಧ್ಯವರ್ಜನ ಶಿಬಿರ ಉಪಾಧ್ಯಕ್ಷರು ಉಪಸ್ಥಿತರಿದ್ದರು.
ಒಕ್ಕೂಟದ ಅಧ್ಯಕ್ಷರಾದ ಚಂದ್ರಕಲಾ ಮೇಸ್ತ್ರಿ ಯವರಾದ ಈಶ್ವರ ಗ್ರಾಮದ ಮುಖ್ಯಸ್ಥರಾದ ಗೋವಿಂದಪ್ಪ ರುದ್ರಪ್ಪ ಯೋಗೀಶ್ ಭಾಗ್ಯಮ್ಮ ಸಮನ್ವಯಾಧಿಕಾರಿ ಭವಾನಿ ಮೇಲ್ವಿಚಾರಕರಾದ ನೀಲಮ್ಮ ಸೇವಾ ಪ್ರತಿನಿಧಿವರಾದ ಲಕ್ಷ್ಮಿ vle ಮಣಿಕಂಠ ಗ್ರಾಮದ ಮುಖ್ಯಸ್ಥರು ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು

