ನಾಯಕನಹಟ್ಟಿ :
ಹೋಬಳಿಯ ರೈತರಿಗೆ ಯೂರೀಯಾ ಗೊಬ್ಬರ ಬೇಡಿಕೆ ಇದೆ ಸರ್ಕಾರ ಯೂರೀಯಾ ಗೊಬ್ಬರ ನೀಡಬೇಕು ಎಂದು ಕರವೇ ಕನ್ನಡ ಸೇನೆ ತಾಲ್ಲೂಕು ಅಧ್ಯಕ್ಷ ಪಿ ಮುತ್ತಯ್ಯ ಜಾಗನೂರಹಟ್ಟಿ ಆಗ್ರಹ
ನಾಯಕನಹಟ್ಟಿ :
ಸರ್ಕಾರ ಹೋಬಳಿಯ ರೈತರಿಗೆ ಯೂರೀಯಾ ಗೊಬ್ಬರ ಬೇಡಿಕೆ ಇದೆ ಕೃಷಿ ಇಲಾಖೆ ಅಧಿಕಾರಿಗಳು ರೈತರ ಕಡೆ ಗಮನಹರಿಸಿ ಶೀಘ್ರದಲ್ಲಿ ರೈತರಿಗೆ ಯೂರೀಯಾ ಗೊಬ್ಬರ ಪೂರೈಕೆ ಮಾಡಬೇಕೆಂದು ಕರವೇ ಕನ್ನಡ ಸೇನೆ ತಾಲ್ಲೂಕು ಅಧ್ಯಕ್ಷ ಪಿ ಮುತ್ತಯ್ಯ ಜಾಗನೂರಹಟ್ಟಿ ಹೇಳಿದರು.
ಬುಧವಾರ ಪಟ್ಟಣದ ನಮ್ಮ ಗ್ಲೋಮಾರ್ ರಸಗೊಬ್ಬರ ಅಂಗಡಿಗೆ ಬೇಟಿ ನೀಡಿ ಸರದಿ ಸಾಲಿನಲ್ಲಿ ನಿಂತಿರುವ ರೈತರ ಜೊತೆ ಯೂರೀಯಾ ಗೊಬ್ಬರ ಬಗ್ಗೆ ಚರ್ಚೆಸಿ ಮಾತಾನಾಡಿದ ಅವರು ಕೆಳದ ಮೂರು ನಾಲ್ಕು ದಿನದಿಂದ ಉತ್ತಮ ಮಳೆಯಾಗಿದ್ದು, ಮುಂಗಾರು ಬಿತ್ತನೆ, ಈರುಳ್ಳಿ, ಬದನೆಕಾಯಿ, ಟಮೋಟೋ ಇತರೆ ಬೆಳೆಗಳಿಗೆ ಯೂರೀಯಾ ಗೊಬ್ಬರ ಅತಿಯಾಗಿ ಬೆಳೆಸುತ್ತಾರೆ ಆದ್ಧರಿಂದ ಸರ್ಕಾರ ಕೂಡಲೇ ಸಮಪರ್ಕವಾಗಿ ರೈತರಿಗೆ ತೊಂದರೆ ಆಗದಂತೆ ಯೂರೀಯಾ ಗೊಬ್ಬರ ವಿತರಣೆ ಮಾಡಬೇಕು ಮತ್ತು ಅಂಗಡಿ ಮಾಲೀಕ ರೈತರ ದಾಖಲಾತಿ ಪರಿಶೀಲನೆಯಲ್ಲಿ ಒಬ್ಬ ರೈತರ ಕುಟುಂಬದಲ್ಲಿ ಯಾರಾದರೂ ಆಧಾರ್ ಕಾರ್ಡ, ಪಹಣಿ, ಎಫ್‌ಐಡಿ, ರೇಷನ್ ಕಾರ್ಡ ದಾಖಲೆಗಳನ್ನು ಪಡೆದುಕೊಂಡು ಯೂರೀಯಾ ಗೊಬ್ಬರ ವಿತರಣೆ ಮಾಡಬೇಕು.
ಕೃಷಿ ಇಲಾಖೆ ಅಧಿಕಾರಿಗಳು ಗೊಬ್ಬರ ಅಂಗಡಿಗಳಿಗೆ ಬೇಟಿ ನೀಡಿ ಅಂಗಡಿಗಳಲ್ಲಿ ಇರುವ ಯೂರೀಯಾ ಗೊಬ್ಬರ, ದಾಸ್ತಾನು ಬಗ್ಗೆ ಪರಿಶೀಲನೆ ಮಾಡಿ ಕೂಡಲೇ ರೈತರಿಗೆ ಯೂರೀಯಾ ಗೊಬ್ಬರ ವಿತರಣೆ ಮಾಡಬೇಕು ಇಲ್ಲಂದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡುವಾದಗಿ ಎಚ್ಚರಿಕೆ ನೀಡಿದರು.
ಇದೇ ವೇಳೆ ಎನ್ ದೇವರಹಳ್ಳಿ ಹಾಲಿನ ಡೈರಿ ಅಧ್ಯಕ್ಷ ಜಿ ಮಲ್ಲಿಕಾರ್ಜುನ, ನಲಗೇತನಹಟ್ಟಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಬಂಗಾರಪ್ಪ ರಾಮದುರ್ಗ ಮಾತಾನಾಡಿದರು.
ಕರವೇ ಕನ್ನಡ ಸೇನೆ ನಗರ ಘಟಕ ಅಧ್ಯಕ್ಷ ತಿಪ್ಪೇಸ್ವಾಮಿ, ಸಣ್ಣಮಲ್ಲಪ್ಪ, ಮಲ್ಲಿಕಾರ್ಜುನ, ಸಂತೋಷ ಇತರರು ಇದ್ದರು.

