ಔಷಧಿ ಇಲ್ಲದೇ ಮನುಷ್ಯನ ಆರೋಗ್ಯ ಕಾಪಾಡಲು ಯೋಗ ಸಹಕಾರಿ : ಡಾ. ನಾಗರಾಜ್
ಚಳ್ಳಕೆರೆ: ಮಾನಸಿಕ ಒತ್ತಡದಿಂದ ಅನಾರೋಗ್ಯಕ್ಕೆ ಸಿಲುಕುವ ಪ್ರತಿಯೂಬ್ಬ ಮನುಷ್ಯರು ಯೋಗ ಮಾಡುವುದರಿಂದ ಯಾವುದೇ ಔಷಧಿ ಇಲ್ಲದೆ, ಆರೋಗ್ಯ ಕಾಪಾಡಲು ಉತ್ತಮ ಮಾರ್ಗವಾಗಿದೆ ಎಂದು ಸಾಣೀಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಅಡಳಿತ ವೈದ್ಯಾಧಿಕಾರಿ ಡಾ.ನಾಗರಾಜ್ ಹೇಳಿದರು.
ತಾಲ್ಲೂಕಿನ ಸಾಣೀಕೆರೆ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಸಾಣಿಕೆರೆ, ಪ್ರಾಥಮಿಕ ಆರೋಗ್ಯ ಕೇಂದ್ರ ಸಾಣಿಕೆರೆ, ಪೊಲೀಸ್ ಇಲಾಖೆ ಸಾಣಿಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಾಣಿಕೆರೆ ಪತಂಜಲಿ ಶಿಕ್ಷಣ ಯೋಗ ಸಮಿತಿ ಸಾಣಿಕೆರೆ ಶಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನೆಡೆದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು
ದೇಹ, ಮನಸ್ಸು ಹಾಗೂ ಆತ್ಮದ ಮಧ್ಯೆ ಸಮತೋಲನ ಸಾಧಿಸುವುದೇ ಯೋಗವಾಗಿದೆ ವರ್ಷದ ಜೂನ್ ತಿಂಗಳ 21ರಂದು ದೀರ್ಘ ದಿನವಾಗಿದ್ದರಿಂದ ಈ ದಿನವನ್ನು ವಿಶ್ವ ಯೋಗ ದಿನವನ್ನಾಗಿ ಆಚರಿಸಲಾಗುತ್ತಿದೆ. ಕಳೆದ 10 ವರ್ಷಗಳಿಂದ ಇದು ನಡೆಯುತ್ತ ಬಂದಿದ್ದು, ಈಗ ಹನ್ನೊಂದನೇ ವರ್ಷಕ್ಕೆ ಕಾಲಿರಿಸಿದೆ. ಪ್ರಧಾನಿ ನರೇಂದ್ರ ಮೋದಿಯವರಿಂದಾಗಿ ಯೋಗ ದಿನಕ್ಕೆ ಮತ್ತಷ್ಟು ಕಳೆ ಬಂದಂತಾಗಿದೆ. ಋಷಿ ಮುನಿಗಳ ಕಾಲದಿಂದಲೂ ಯೋಗಕ್ಕೆ ಅತೀ ಮಹತ್ವ ಸ್ಥಾನ ಪಡೆದಿದೆ. ಯೋಗವು ಹುಟ್ಟಿರುವುದೇ ನಮ್ಮ ಭಾರತದಿಂದ. ಸನಾತನ ಕಾಲದಿಂದಲೂ ಇದು ಮುಂದುವರೆದಿದೆ. ಇಂದು ಜಾಗತೀಕವಾಗಿ ಯೋಗಕ್ಕೆ ಮಹತ್ವ ಬಂದಿರುವುದಾದರೆ ಅದು ನಮ್ಮ ಹೆಮ್ಮೆಯ ಭಾರತದಿಂದ ಎಂಬುದನ್ನು ಯಾರೂ ಮರೆಯದೆ ಪ್ರತಿದಿನ ಯೋಗ ಮಾಡಿದರೆ ನಮ್ಮ ಆರೋಗ್ಯ ಕಾಪಾಡಲು ಅನುಕೂಲವಾಗುವ ಜೊತೆಗೆ ಯಾವುದೇ ಔಷಧಿ ಸೇವನೆ ಮಾಡದೇ ಆರೋಗ್ಯವಂತರಾಗಿ ಇರಬಹುದು ಎಂದರು.
ಸಾಣಿಕೆರೆ ಪೊಲೀಸ್ ಠಾಣೆಯ ಎ.ಎಸ್.ಐ.ತಿಪ್ಪೇಸ್ವಾಮಿ ಮಾತನಾಡಿ ಇತ್ತಿಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಒತ್ತಡಗಳಿಗೆ ಒಳಗಾಗುತ್ತಿದ್ದು ದೈಹಿಕ ಚಟುವಟಿಕೆ ಕಡಿಮೆಯಾಗುತ್ತಿರುವುದರಿಂದ ಮಾನಸಿಕ ಹಾಗೂ ದೈಹಿಕ ಸಮಸ್ಯೆಗಳಿಂದ ಬಳುತ್ತಿದ್ದಾರೆ. ಈ ಎಲ್ಲ ಸಮಸ್ಯೆಗಳಿಗೂ ಯೋಗಾಭ್ಯಾಸದ ಅಳವಡಿಕೆಯಿಂದ ಆರೋಗ್ಯಕರ ಪರಿಹಾರ ಕಂಡುಕೊಳ್ಳಬಹುದು. ಆದ್ದರಿಂದ ಪ್ರತಿಯೊಬ್ಬರೂ ಯೋಗ ಚಟುವಟಿಕೆಯಲ್ಲಿ ಭಾಗವಹಿಸಬೇಕು ಹಾಗೂ ಅದನ್ನು ಜೀವನ ಶೈಲಿಯಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜ್ ತಿಪ್ಪೇಸ್ವಾಮಿ ಜಗನ್ನಾಥ್ ದಯಾನಂದ್, ಶಾಲೆಯ ಶಿಕ್ಷಕರು ಮಕ್ಕಳು ಹಾಗೂ ಸಿಬ್ಬಂದಿ ವರ್ಗದವರು ಆಶಾ ಕಾರ್ಯಕರ್ತೆಯರು ಗ್ರಾಮಸ್ಥರು ಉಪಸ್ಥಿತಿರಿದ್ದರು.

