ಚಳ್ಳಕೆರೆ : ಸತತವಾಗಿ ಮೂರು ಗೆಲುವು ಸಾಧಿಸಿದ ಶಾಸಕ ಟಿ. ರಘುಮೂರ್ತಿ ರವರ ಹುಟ್ಟು ಹಬ್ಬದ ಅಂಗವಾಗಿ ಅಭಿಮಾನಿಗಳು ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಚಿಕಿತ್ಸೆ ಕಿಟ್, ಆಹಾರ ಧಾನ್ಯಗಳನ್ನು ವಿತರಿಸುವ ಮೂಲಕ ಜನ್ಮದಿನಾಚರಣೆ ಆಚರಿಸಿದರು.

ನಗರದ ಚಿತ್ರದುರ್ಗ ರಸ್ತೆಯ ಜೀವ ಸ್ವಾಸ್ಥ್ಯ ಶಾಲಾಬಾಲಕಿಯರ ವಸತಿ ಗೃಹದಲ್ಲಿ ಇರುವಂತಹ ಹಾಸ್ಟೆಲ್ ನಲ್ಲಿ ಶಾಸಕ ಟಿ ರಘುಮೂರ್ತಿ ಅಭಿಮಾನಿಗಳು ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಿದರು.

ಈ ಸಂದರ್ಭದಲ್ಲಿ ಬಾಲಕಿಯರ ಹಾಸ್ಟೆಲ್ ಮುಖ್ಯಸ್ಥರಾದ ಗಂಗಾಧರ್ ರವರ ಮಗಳ ಸಾನಿಯಾ ಇವರ ಹುಟ್ಟುಹಬ್ಬವನ್ನು ಸಹ ಈ ಸಂದರ್ಭದಲ್ಲಿ ಆಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ
ನೇತಾಜಿ ಸ್ನೇಹ ಬಳಗದ ವತಿಯಿಂದ ಮತ್ತು ಮತ್ತು ನಗರಸಭಾ ಅಧ್ಯಕ್ಷರಾದ ಮಂಜುಳಾ ಆರ್ ಪ್ರಸನ್ ಕುಮಾರ್ ಇವರ ಸಹಯೋಗದಲ್ಲಿ ದವಸಧಾನ್ಯ ಮತ್ತು ಸುರಕ್ಷಾ ಪಾಲಿ ಕ್ಲಿನಿಕ್ ರವರಿಂದ ಪ್ರಥಮ ಚಿಕಿತ್ಸಾ ಔಷದ ಪೆಟ್ಟಿಗೆಯನ್ನು ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ಕೆಪಿಸಿಸಿ ಕುಶಲಕರ್ಮಿಗಳ ರಾಜ್ಯಾಧ್ಯಕ್ಷರಾದ ಆರ್ ಪ್ರಸನ್ನ ಕುಮಾರ್,ನಗರ ಸಭಾ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರಾದ ಚೇತನ್ ಕುಮಾರ್ ( ಕುಮ್ಮಿ)
ನಗರಸಭೆ ಮಾಜಿ ಉಪಾಧ್ಯಕ್ಷರಾದ ವಿಜಯಕುಮಾರ್
ನನ್ನಿವಾಳ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಬಸವರಾಜ್ ,,
ಸುರಕ್ಷಪಾಲಿ ಕ್ಲಿನಿಕ್ ನ ಫರೀದ್ ಖಾನ್ ಮತ್ತು ನಗರಸಭಾ ಸದಸ್ಯರಾದ ನೇತಾಜಿ ಪ್ರಸನ್ನ ನೇತಾಜಿ ಸ್ನೇಹ ಬಳಗದ ನಿರ್ದೇಶಕರಾದ ಕಂಟ್ರಾಕ್ಟರ್ ನಾಗೇಂದ್ರ,
ಹಾಗೂ ಈ ಹಾಸ್ಟೆಲ್ ವ್ಯವಸ್ಥಾಪಕರಾದ ಗಂಗಾಧರ್ ಅವರ ಕುಟುಂಬ ವರ್ಗ ಭಾಗಿಯಾಗಿ ಶಾಸಕರ ಹೆಸರಿನಲ್ಲಿ ಕೇಕ್ ಮತ್ತು ಸಿಹಿ ಊಟದ ಮುಖಾಂತರ ಮಕ್ಕಳಿಗೆ ವ್ಯವಸ್ಥೆ ಮಾಡುವುದರ ಮುಖಾಂತರ ಹುಟ್ಟುಹಬ್ಬವನ್ನು ಆಚರಿಸಲಾಯಿತು.ಪುಟಾಣಿಗಳಾದ ಅಪ್ಸರ ನೇತಾಜಿ,
ಪ್ರಾರ್ಥನ
ನೇತಾಜಿ, ಮತ್ತು ಸ್ನೇಹ ಮತ್ತು ಭಾಗ್ಯ ಶಿಲ್ಪ ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು

About The Author

Namma Challakere Local News
error: Content is protected !!