ಚಳ್ಳಕೆರೆ : ನಗರದಲ್ಲಿ ಸೂರು ಇಲ್ಲದವರಿಗೆ ಸ್ವಂತ ಸೂರು ನೀಡುವ ಮಹತ್ವಕಾಂಕ್ಷಿ ಯೋಜನೆಯ ಸ್ಥಳೀಯ ಶಾಸಕ ಟಿ ರಘುಮೂರ್ತಿ ಕನಸಿನ ಮನೆಗಳ ಜಿಪ್ಲಸ್ ಟಿ ಮನೆಗಳ ಕಾಮಗಾರಿ ಮುಗಿದಿದ್ದು ಕಾಮಗಾರಿ ಸ್ಥಳಕ್ಕೆ ನಗರಸಭೆ ಅಧ್ಯಕ್ಷ ಆರ್ ಮಂಜುಳಾ ಪ್ರಸನ್ನ ಕುಮಾರ್ , ಉಪಾಧ್ಯಕ್ಷ ಕವಿತಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಗರದ ಪಾವಗಡ ರಸ್ತೆಯಲ್ಲಿರುವಂತಹ ಜಿ ಪ್ಲಸ್ ಟು ಮನೆಗಳ ಸಮುಚ್ಚಾಯಕ್ಕೆ ಭೇಟಿ ನೀಡಿದ ಅವರು ಬಡತನ ರೇಖೆಗಿಂತ ಕೆಳಗಿರುವಂತಹ ನಗರದ ಸಾರ್ವಜನಿಕರು ನಗರಸಭೆಗೆ ಅರ್ಜಿಯನ್ನು ಹಾಕಿ ಜಿ ಪ್ಲಸ್ ಟು ಮನೆಯನ್ನು ಪಡೆದುಕೊಳ್ಳಬಹುದು ಸ್ವಂತ ಸೂರಿಲ್ಲದೆ ಬಾಡಿಗೆ ಮನೆಯಲ್ಲಿ ವಾಸಿಸುವಂತಹ ಸಾವಿರಾರು ಫಲನೆಗಳು ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಬಹುದು, ಕಾಮಗಾರಿಯ ಗುಣಮಟ್ಟ ಹಾಗೂ ಇಂಜಿನಿಯರ್ ಗಳಿಂದ ಮಾಹಿತಿ ಪಡೆದುಕೊಂಡರು.

ಇದೇ ಸಂದರ್ಭದಲ್ಲಿ ನಗರಸಭೆ ವಸತಿ ಯೋಜನೆಯ ಸಹಾಯಕಾಧಿಕಾರಿಗಳಾದ ಭೂತಯ್ಯ ಹಾಗೂ ಸಿಬ್ಬಂದಿ ವರ್ಗ ಮತ್ತಿತರರು ಹಾಜರಿದ್ದರು

About The Author

Namma Challakere Local News
error: Content is protected !!