ಚಳ್ಳಕೆರೆ ಯಾದಲಗಟ್ಟೆ ಮಾರಮ್ಮ, ಕರಿಯಮ್ಮ ದೇವತೆಗಳ ದೊಡ್ಡ ಜಾತ್ರೆಗೆ ಯಾದಲಗಟ್ಟೆ, ಮಾರಮ್ಮ ದೇವಸ್ಥಾನದಲ್ಲಿ ಕಂಕಣ ಕಟ್ಟುವುದರ ಮೂಲಕ ಬೆಂಗಳೂರಿನ ಶಿರಡಿ ಸಾಯಿ ಭಿಕ್ಷಾ ಕೇಂದ್ರ ಪರಮಪೂಜ್ಯ ಶ್ರೀ ಶ್ರೀ ಲಕ್ಷ್ಮೀ ಶ್ರೀನಿವಾಸ ಗುರೂಜಿ ಚಾಲನೆ ನೀಡಿ ನಂತರ ಮಾತನಾಡಿ,

ಈ ಗ್ರಾಮಕ್ಕೆ ಜಾತ್ರೆಯಿಂದ ಈ ಗ್ರಾಮ ಉಜ್ಜಲವಾಗಿ ಬೆಳೆಯಲಿ ಹೆಚ್ಚು ವಿದ್ಯಾವಂತರನ್ನಾಗಿ ಮಾಡಲಿ ಹೆಚ್ಚು ಉದ್ಯೋಗವನ್ನು ಗಿಟ್ಟಿಸಿಕೊಳ್ಳುವುದರ ಮೂಲಕ ನಿರುದ್ಯೋಗ ನಿರ್ಮೂಲನೆ ಆಗಲಿ ರೈತರಿಗೆ ಒಳ್ಳೆಯ ಮಳೆ ಬೆಳೆ ಚೆನ್ನಾಗಿ ಆಗಿ ಉಜ್ಜಲ ಭವಿಷ್ಯವನ್ನು ಕಂಡುಕೊಳ್ಳಲಿ ಈ ಜಾತ್ರೆಯಿಂದ ರಾಜ್ಯದ ಗಮನವನ್ನು ಸೆಳೆಯಲಿ ಎಂದು ಆಶಿಸಿದರು ಕರ್ನಾಟಕದಲ್ಲಿ ಗ್ರಾಮ ದೇವತೆಗಳ ಮಹತ್ವ ಬಹಳ ಅಗತ್ಯವಿದೆ ಮನುಷ್ಯರಿಗೆ ರೋಗ ,ಕಷ್ಟ ನಷ್ಟ ಉಂಟಾದಾಗ ಗ್ರಾಮದೇವತೆಗಳ ಪೂಜೆ ಪುನಸ್ಕಾರಗಳಿಂದ ಪರಿಹಾರ ದೊರಕಲಿದೆ ದೇವತೆಯ ಆಶೀರ್ವಾದ ಇಂದಿಗೂ ಇರಲಿ ಎಂದು ಆಶಿಸಿದರು ಈ ಗ್ರಾಮದ ಮುಖಂಡರಾದ ಯಾದಲಗಟ್ಟೆ ಜಗನ್ನಾಥ್ ಮಾತನಾಡಿ ಈ ಗ್ರಾಮಕ್ಕೆ ಸುಮಾರು 400 ವರ್ಷಗಳ ಇತಿಹಾಸವಿದ್ದು ದೊಡ್ಡೇರಿ ತಾಲೂಕ್ ಕೇಂದ್ರವಾಗಿದ್ದು ಆ ಕೇಂದ್ರ ಆಡಳಿತ ಪ್ರದೇಶಕ್ಕೆ ಒಳಪಟ್ಟು ರಾಜರ ಆಳ್ವಿಕೆಯನ್ನು ನಡೆಸಿದಂತ ಗ್ರಾಮವಾಗಿದೆ ಊರಿನ ಹೊರಭಾಗದಲ್ಲಿ ಈ ಊರಿನ ರಾಜನ ಸಮಾಧಿ ಇದ್ದು ಗ್ರಾಮಸ್ಥರು ಹಿಂದೆ ದೇವಸ್ಥಾನವನ್ನು ಕಟ್ಟಿ ಸ್ಮರಿಸಿದ್ದಾರೆ ಹಾಗೆಯೇ ಈ ಗ್ರಾಮದ ಇತಿಹಾಸವನ್ನು ಹೊರತರಲು ಒಂದು ದಾಖಲೆ ರೂಪದಲ್ಲಿ ಪುಸ್ತಕ ಹೊರ ತರುವ ವ್ಯವಸ್ಥೆಯಾಗಲಿ ಎಂದು ಹೇಳಿದವರು ಈ ಗ್ರಾಮದ ಜಾತ್ರೆಯಲ್ಲಿ ಮುಂಜಾಗ್ರತೆ ವಹಿಸಿ ಜಾತ್ರೆಯನ್ನು ಯಶಸ್ವಿ ಮಾಡೋಣ ಎಂದು ಗ್ರಾಮಸ್ಥರಲ್ಲಿ ಮನವಿ ಮಾಡಿದರು ಗ್ರಾಮದ ಯುವ ಮುಖಂಡ ರಂಗಸ್ವಾಮಿ ಮಾತನಾಡಿ ಇಂದು ಯುವ ಪೀಳಿಗೆಗೆ ದೇವಸ್ಥಾನಗಳ ಕಲ್ಪನೆ ದೇವರ ಆರಾಧನೆ ಬಹಳ ಮುಖ್ಯವಾಗಿದ್ದು ಆ ನಿಟ್ಟಿನಲ್ಲಿ ಎಲ್ಲರೂ ಯೋಚಿಸಿ ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ತೊಡಗಿಸಿ ಎಂದು ಹೇಳಿದರು ಈ ಕಾರ್ಯಕ್ರಮದಲ್ಲಿ ಗ್ರಾಮದ ಅರ್ಚಕರಾದ ರಾಮಮೂರ್ತಿ ಮಾರಿಕಾಂಬಾ ದೇವಿಯ ಪೂಜಾರಿ ಗುರುಮೂರ್ತಿ ಗ್ರಾಮದ ಮುಖಂಡರಾದ ಓ .ಪಾಲಯ್ಯ ದೇವಸ್ಥಾನದ ಕಾರ್ಯದರ್ಶಿ ಹನುಮಣ್ಣ ಗೌಡ, ಗ್ರಾಮಸ್ಥರಾದ ಮುತ್ತುರಾಜ್, ರಾಜಣ್ಣ, ಚಿಕ್ಕಣ್ಣ, ಹನುಮಂತರಾಯ ಓಬಳೇಶಪ್ಪ, ಜಯರಾಮ್, ಗೌರಣ್ಣ ವಕೀಲ ಮಂಜಣ್ಣ ಉಪನ್ಯಾಸಕ ಡಾಕ್ಟರ್ ಮಂಜಣ್ಣ, ಬೊಮ್ಮಜ್ಜ, ತಿಪ್ಪೇಸ್ವಾಮಿ, ಮತ್ತಿತರರು ಉಪಸ್ಥಿತರಿದ್ದರು.

ಜಾತ್ರೆಯ ಪ್ರಯುಕ್ತ ಗ್ರಾಮದ ವಿವಿಧ ಬಡಾವಣೆಗಳನ್ನು ದೀಪಾಲಂಕಾರಗಳಿಂದ ಮತ್ತು ತೋರಣಗಳಿಂದ ಶೃಂಗರಿಸಲಾಗಿದೆ, ಜಾಗೃತ ಜಾಗೃತ ಕ್ರಮವಾಗಿ ಕ್ರಮವಾಗಿ ಪೋಲಿಸ್ ಇಲಾಖೆಯ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಗ್ರಾಮದ ಆರೋಗ್ಯದ ದೃಷ್ಟಿಯಿಂದ ಆರೋಗ್ಯ ಇಲಾಖೆಯವರನ್ನು ನಿಯೋಜಿಸಲಾಗಿದೆ ಗ್ರಾಮದ ಸರ್ವ ವ್ಯವಸ್ಥೆಗೆ ಗ್ರಾಮ ಪಂಚಾಯಿತಿ ಕಂದಾಯ ಇಲಾಖೆಯ ಹಾಗೂ ವಿವಿಧ ಇಲಾಖೆಗಳ ಸಹಕಾರವನ್ನು ಕೋರಲಾಗಿದೆ ಈ ಗ್ರಾಮದಲ್ಲಿ ಈಗಾಗಲೇ ಮಧ್ಯಪಾನವನ್ನು ನಿಷೇಧಿಸಲಾಗಿದ್ದು ಮುಂಜಾನೆ ಮುಂಜಾಗ್ರತೆ ಕ್ರಮವಾಗಿ ಅಬಕಾರಿ ಇಲಾಖೆಯವರಿಗೆ ಮನವಿಯನ್ನು ಸಲ್ಲಿಸಲಾಗಿದೆ ಈ ಜಾತ್ರೆಯು 21 ವರ್ಷಗಳ ನಂತರ ನಡೆಯುವುದರಿಂದ ಈ ತಿಂಗಳ 24ರ ವರೆಗೆ ಅದ್ದೂರಿಯಾಗಿ ಜರುಗಲಿದೆ

About The Author

Namma Challakere Local News
error: Content is protected !!