ಚಳ್ಳಕೆರೆ : ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರು ಅಧಿಕಾರಕ್ಕೆ‌ ಬಂದಾಗಿನಿಂದ ಸರಕಾರಿ ಕಛೇರಿಗಳಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ, ಇದಕ್ಕೆ ಕುಮಕ್ಕು ನೀಡುವ ಅವರ ಗನ್ ಮ್ಯಾನ್, ಹಾಗೂ ಅವರ ಚೇಲಗಳೆ ಅಧಿಕಾರಿಗಳಿಗೆ ದೂರವಾಣಿ ಮೂಲಕ ಹೇಳಿರುವುದು ಸಾಕ್ಷಿಕರಿಸುತ್ತದೆ ಎಂದು ಜಿಲ್ಲಾ ಬಿಜೆಪಿ ಮಂಡಳ ಅಧ್ಯಕ್ಷ ಕೆ.ಟಿ.ಕುಮಾರಸ್ವಾಮಿ ಆರೋಪಿಸಿದರು.

ಅವರು ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದೊಂದಿಗೆ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದ ಅವರು ತಾಲೂಕಿನ ವೃಂದಾವನಳ್ಳಿ ಗ್ರಾಮದ ಬಡ ಕುಟುಂಬದ ವ್ಯಕ್ತಿ, ತನ್ನ ಜಮೀನನ್ನು ಮಾರಾಟ ಮಾಡಿ ಅವನ ಕಷ್ಟ ಕಾರ್ಪಣ್ಯಗಳಿಗೆ ಜಮೀನು ಮಾರಾಟ ಮಾಡಲು ಹೊರಟರೆ, ಕ್ಷೇತ್ರದ ಶಾಸಕರ ಅವರ ಗನ್ ಮ್ಯಾನ್ ಸಬ್ ರಿಜಿಸ್ಟರ್ ಗೆ ದೂರವಾಣಿ ಮೂಲಕ ರಿಜಿಸ್ಟರ್ ಮಾಡಬಾರದು ಎಂದು ಹೇಳುವುದು ಸಂವಿಧಾನದ ಹಕ್ಕನ್ನು ಹತ್ತಿಕ್ಕಿದಂತೆ ಆದ್ದರಿಂದ ಶಾಸಕರು ಈ ಕೂಡಲೇ ನೈತಿಕ ಹೊಣೆ ಹೊತ್ತು ತಾವಿಟ್ಟುಕೊಂಡಿರುವಂತಹ ಅಂಗರಕ್ಷಕರಿಗೆ ಹಾಗೂ ಚೀಲಗಳಿಗೆ ಬುದ್ಧಿವಾದ ಹೇಳಬೇಕು, ತಾಲೂಕಿನ 34 ಇಲಾಖೆಗಳಲ್ಲಿ ಇರುವ ಭ್ರಷ್ಟಾಚಾರವನ್ನು ಕೊನೆಗೊಳಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟದ ಮೂಲಕ ತಕ್ಕ ಉತ್ತರ ನೀಡಲಾಗುತ್ತದೆ ಎಂದು ಕಿಡಿ ಕಾರಿದರು.

ಇದೇ ಸಂದರ್ಭದಲ್ಲಿ ನಿಕಟ ಪೂರ್ವ ಬಿಜೆಪಿ ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್ ಮತನಾಡಿ, ಚಳ್ಳಕೆರೆ ತಾಲೂಕಿನಲ್ಲಿ ಆಡಳಿತಯಂತ್ರ ಸಂಪೂರ್ಣವಾಗಿ ಕುಸಿದಿದೆ, ಆದ್ದರಿಂದ ಬಿಜೆಪಿ ಯಿಂದ ಜನಾಂದೋಲನ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗುತ್ತದೆ, ಕಾರಣ ತಾಲ್ಲೂಕಿನಲ್ಲಿ ಇರುವ ಎಲ್ಲಾ ಇಲಾಖೆಗಳಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ, ವೃಂದವ್ವನಹಳ್ಳಿ ಬಡ ಕುಟುಂಬದವರು ತಮ್ಮ ಸ್ವಂತ ಜಮೀನು ಮಾರಾಟ ಮಾಡಲು ಶಾಸಕರನ್ನು ಕೇಳಬೇಕಿತ್ತೆ, ಅವರ ಅಂಗರಕ್ಷಕ ಸಬ್ ರಿಜಿಸ್ಟರ್ ಗೆ ದೂರವಾಣಿ ಕರೆ ಮಾಡಿ ರಿಜಿಸ್ಟರ್ ನಿಲ್ಲಿಸುವುದರ ಹಿಂದಿನ ಉದ್ದೇವೇನು, ಅಂಗ ರಕ್ಷಕರ ಕೆಲಸ ಅಂಗರಕ್ಷಕ ಮಾಡಬೇಕು ಆದರೆ ಮೂವತ್ನಾಲ್ಕು ಇಲಾಖೆಗಳಲ್ಲಿ ಅಂಗರಕ್ಷಕರ ಹಸ್ತಕ್ಷೇಪ ಇರುವುದರಿಂದ ಶಾಸಕರಿಗೆ ಶೋಭ ತರುವಂತದ್ದಲ್ಲ, ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಾಗುತ್ತದೆ, ಎಂದರು.

ಇದೇ ಸಂಧರ್ಭದಲ್ಲಿ ತಾಲೂಕು ಮಂಡಳ ಅಧ್ಯಕ್ಷ ಸುರೇಶ್, ಎವಿಬಿಪಿ.ಮಂಜುನಾಥ್, ಕಾರ್ಯದರ್ಶಿ ಸುರೇಶ್, ರುದ್ರಮುನಿ, ದಿನೇಶ್ ರೆಡ್ಡಿ,ಈಶ್ವರ ನಾಯಕ, ತಿಪ್ಪೇಸ್ವಾಮಿ, ದೊಡ್ಡಯ್ಯ, ಇತರರು ಹಾಜರಿದ್ದರು.

About The Author

Namma Challakere Local News
error: Content is protected !!