ಸಂಭ್ರಮದ ಲಕ್ಷ ದೀಪೋತ್ಸವ, ಬೆಳ್ಳಿ ರಥೋತ್ಸವ

ನಾಯಕನಹಟ್ಟಿ: ಗುರು ತಿಪ್ಪೇರುದ್ರಸ್ವಾಮಿ ದೇವಾಲಯದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ಲಕ್ಷದೀಪೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ
ನಡೆಯಿತು.

ಸಂಜೆ 6.30ಕ್ಕೆ ಲಕ್ಷ ದೀಪೋತ್ಸವಕ್ಕೆ ಜ್ಯೋತಿ
ಬೆಳಗಿಸುವ ಮೂಲಕ ಅಪರ ಜಿಲ್ಲಾಧಿಕಾರಿ ಹಾಗೂ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಆಡಳಿತ ಅಧಿಕಾರಿ ಬಿ.ಟಿ. ಕುಮಾರಸ್ವಾಮಿ ಚಾಲನೆ ನೀಡಿದರು

ದೀಪೋತ್ಸವದಲ್ಲಿ ಸುಮಾರು 1 ಲಕ್ಷ ದೀಪಗಳನ್ನು ಭಕ್ತರು
ಬೆಳಗಿಸಿದರು.

ತಲಾ
108 ಹಣತೆಗಳಿರುವ 240 ದೀಪಸ್ತಂಭಗಳನ್ನು ಈ ಬಾರಿ ವ್ಯವಸ್ಥೆ ಮಾಡಲಾಗಿತ್ತು.

ಒಳಮಠ, ಹೊರಮಠ, ಈಶ್ವರ ದೇವಾಲಯ, ಏಕಾಂತಮಠದ ಗೋಪುರಗಳಿಗೆ ದೀಪಾಲಂಕಾರ ಮಾಡಲಾಗಿದೆ.

ರಾತ್ರಿ 8ಕ್ಕೆ ದೇವಾಲಯದ ಆವರಣದಲ್ಲಿ ಬೆಳ್ಳಿ ರಥೋತ್ಸವ ನೆರವೇರಿಸಲಾಯಿತು.

ನಾಯಕನಹಟ್ಟಿಯ ಗುರು ತಿಪ್ಪೇರುದ್ರಸ್ವಾಮಿ ದೇವಾಲಯದಲ್ಲಿ ಗುರುವಾರ ಲಕ್ಷ ದೀಪೋತ್ಸವ ನಡೆಯಿತು.

ದೇವಾಲಯದ ಮುಂಭಾಗದಲ್ಲಿ ಚಳ್ಳಕೆರೆಯ ನೃತ್ಯನಿಕೇತನ ಶಾಲೆಯ ವಿದ್ಯಾರ್ಥಿಗಳು ಮಕ್ಕಳ ಅಕರ್ಷಕ ಭರತನಾಟ್ಯ ಪ್ರದರ್ಶಿಸಿದರು.
ಲಕ್ಷ ದೀಪೋತ್ಸವದ ವಿಶೇಷತೆ: ಹಲವು ದಶಕಗಳಿಂದ ಕಾರ್ತಿಕ ಮಾಸದಲ್ಲಿ ದೀಪೋತ್ಸವ
ನಡೆಸಿಕೊಂಡು

ಬರಲಾಗುತ್ತಿದೆ ಎಂದು ದೇವಾಲಯ ಕಾರ್ಯನಿರ್ವಹಣಾಧಿಕಾರಿ ಎಚ್ .ಗಂಗಾಧರಪ್ಪ ತಿಳಿಸಿದ್ದಾರೆ.

ಡಿವೈಎಸ್ಪಿ ಸತ್ಯನಾರಾಯಣ್, ಎಂವೈಟಿ ಸ್ವಾಮಿ, ತಿಪ್ಪೇರುದ್ರಪ್ಪ,

ಪಟ್ಟಣ ಪಂಚಾಯಿತಿ ಸದ್ಯಸರಾದ ಜೆ. ಆರ್ .ರವಿಕುಮಾರ್, ಹಾಗೂ ನಿವೃತ್ತ ತಹಸಿಲ್ದಾರ್ ಎನ್. ರಘುಮೂರ್ತಿ, ರವಿಶಂಕರ್, ಎತ್ತಿನಹಟ್ಟಿ ದೇವರಾಜ್, ನಾಯಕನಹಟ್ಟಿ ಪೊಲೀಸ್ ಠಾಣೆ ಪಿಎಸ್ಐ ಜಿ. ಪಾಂಡುರಂಗಪ್ಪ. ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಸಿಬ್ಬಂದಿ ಎಸ್ . ಸತೀಶ್, ಮಹೇಶ್, ಮನು, ಸೇರಿದಂತೆ ಸಾವಿರಾರು ಭಕ್ತರು ಇದ್ದರು.

About The Author

Namma Challakere Local News
error: Content is protected !!