ಚಳ್ಳಕೆರೆ : ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ನೈರ್ಮಲ್ಯ ಹಾಗೂ ಶುಚಿತ್ವ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಸ್ವಚ್ಚಾ ಇ ಸೇವಾ ಅಭಿಯಾನ ಮೂಲಕ ಜಾಗೃತಿ ಮೂಡಿಸುವ ಸಲುವಾಗಿ ಸರಕಾರ ಆಯೋಜಿಸಿದ್ದ ಅಭಿಯಾನ
ಚಳ್ಳಕೆರೆ ನಗರದ ಸಾರ್ವಜನಿಕ ನೂರು ಹಾಸಿಗೆಯ ಆಸ್ಪತ್ರೆಯ ಆವರಣದಲ್ಲಿ
ಆಡಳಿತಾಧಿಕಾರಿ ಡಾ.ಮಂಜಪ್ಪ ಸ್ವಚ್ಚತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು,

2017ರಲ್ಲಿ ಪ್ರಾರಂಭವಾದ ಸ್ವಚ್ಚತಾ ಹೀ ಸೇವಾ ಅಭಿಯಾನ 11 ವರ್ಷ ಪೂರೈಸುತ್ತಿರುವ ಹಿನ್ನೆಲೆ ಸೆ.17 ರಿಂದ ಅ.2 ರವರೆಗೆ ತಾಲ್ಲೂಕಿನಲ್ಲಿ ಸ್ವಚ್ಛತೆಯ ಅಭಿಯಾನ ಹಾಗೂ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು,

ತಾಲ್ಲೂಕಿನ ಜನತೆ ಸಹಕರಿಸಿದರೆ ಇಡೀ ತಾಲ್ಲೂಕು ಸ್ವಚ್ಛವಾಗಿರುತ್ತದೆ,
ಸ್ವಚ್ಚತಾ ಹೀ ಸೇವಾ ಅಭಿಯಾನದ ಅಂಗವಾಗಿ ಸೆ.17 ರಿಂದ ಅ.2 ರವರೆಗೆ ತಾಲ್ಲೂಕಿನಲ್ಲಿ ಸ್ವಯಂ ಪ್ರೇರಣೆ ಮತ್ತು ಸಾಮಾಜಿಕ ಶ್ರಮದಾನ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲರೂ ಸ್ವಯಂ ಪ್ರೇರಣಿಯಿಂದ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಇದೇ ಸಂಧರ್ಭದಲ್ಲಿ
ಮುಖ್ಯ ವೈದ್ಯಾಧಿಕಾರಿಗಳು, ಆಡಳಿತಾಧಿಕಾರಿ ಡಾ.ಮಂಜಪ್ಪ, ಡಾ.ಪರಮೇಶ್ವರಪ್ಪ, ಡಾ.ಸಾಯಿನಾಗಜ್ಯೋತಿ, ಡಾ.ಪೂಜಾ, ಶುಶ್ರೂಷಕರಾದ
ಶ್ರೀದೇವಿ, ಭಾರತಿ,
ತಜ್ಞ ವೈದ್ಯರು, ವೈದ್ಯಾಧಿಕಾರಿಗಳು, ಕಛೇರಿ ಸಿಬ್ಬಂದಿಗಳು,ಶುಶ್ರೂಷಾಧಿಕಾರಿಗಳು, ಸಿಬ್ಬಂದಿಗಳು, ಆಕ್ಸಿಜನ್ ಟೆಚ್ನಿಷಿಯನ್ಗಳು, ಗ್ರೂಪ್ ಡಿ ಸಿಬ್ಬಂದಿಗಳು, ನಾನ್ ಕ್ಲಿನಿಕ್ ಸಿಬ್ಬಂದಿಗಳು ಹಾಜರಿದ್ದರು..

About The Author

Namma Challakere Local News
error: Content is protected !!