ಮೊಳಕಾಲ್ಕೂರು: ಕಾಪರ್ ಕಂಟ್ರೋಲ್ ಕೇಬಲ್ ಕಳ್ಳರ
ಬಂಧನ
ಮೊಳಕಾಲ್ಕೂರು ಠಾಣೆ ಪೊಲೀಸರು ಸೋಮವಾರ ಕಾಪ
ಕಂಟ್ರೋಲ್ ಕೇಬಲ್ ಕಳವು ಮಾಡಿದ್ದ ಮೂವರು ಕಳ್ಳರನ್ನು
ಬಂಧಿಸಿ, ಸುಮಾರು 300 ಮೀಟರ್ ಅಲ್ಯೂಮಿನಿಯಂ ಡ್ರೆಕ್
ವೈರ್ ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ವೈರ್ ನ ಮೌಲ್ಯ
2 ಲಕ್ಷದ 10 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ.
ಬಂಧಿತರನ್ನು ವಿಜಯನಗರ ಜಿಲ್ಲೆ ಹೊಸಪೇಟೆಯ ಸಣ್ಣ ಈರೇಶ@
ವಿರೇಶ, ಜಗದೀಶ ಮತ್ತು ಮಂಜುನಾಥ ಎಂದು ಗುರುತಿಸಲಾಗಿದೆ.
ಉಳಿದ ಆರೋಪಿಗಳ ಪತ್ತೆ ಕಾರ್ಯ ಮುಂದುವರೆದಿದೆ ಎಂದು ಎಸ್ಪಿ
ರಂಜಿತ್ ಕುಮಾರ್ ಬಂಡಾರು ತಿಳಿಸಿದ್ದಾರೆ.

