ಭಕ್ತಿ ಮತ್ತು ನಂಬಿಕೆಗ ಳರಡು ಭಗವಂತನಿಗೆ ಪ್ರಿಯವಾದ ಸಂಗತಿಗಳು ಎಂದು ನಿಕಟ ಪೂರ್ವ ಏನ್ ರಘುಮೂರ್ತಿ ಹೇಳಿದರು

ಅವರು ತಳುಕು ಹೋಬಳಿ ಚಿಕ್ಕ ಉಳ್ಳಾರ್ಥಿ ಗ್ರಾಮದಲ್ಲಿ ಬೋರಲಿಂಗೇಶ್ವರ ದೇವರ ಜಾತ್ರಾ ಪೂಜ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿ ಭಗವಂತನಿಗೆ ಪ್ರಿಯವಾದದ್ದು ನಂಬಿಕೆ ಮತ್ತು ಭಕ್ತಿ, ವಿಚಾರಗಳಿಗಿಂತ ಇಲ್ಲಿ ಆಚಾರ ಪರಮಶ್ರೇಷ್ಠ ವಾದದ್ದು ದಾರ್ಶನಿಕರೆಲ್ಲರೂ ಕೂಡ ಇವುಗಳಿಂದಲೇ ತಮ್ಮ ಜೀವನದಲ್ಲಿ ನೆಲೆ ಕಂಡುಕೊಂಡಿದ್ದು ಪರಶಿವನ ಸಂದೇಶವೇ ಶಾಂತಿ ಏಕಾಗ್ರತೆ ಮತ್ತು ನಂಬಿಕೆ ಬೋರ್ಲಿಂಗೇಶ್ವರ ಪರಶಿವನ ಪ್ರತಿರೂಪ ಇವನ ಜಾತ್ರ ಕಾರ್ಯಕ್ರಮದಲ್ಲಿ ಭಾಗಿಯಾಗಿರುವಂತಹ ಎಲ್ಲರೂ ಕೂಡ ಒಂದಷ್ಟು ಪುಣ್ಯವನ್ನು ತಮ್ಮ ತಮ್ಮ ಮನೆಗಳಿಗೆ ಕೊಂಡೊಯ್ದಂತಾಗುತ್ತದೆ ಸ್ವಾಮಿಯ ಸೇವೆಗೆ ಪಾತ್ರರಾದಂತ ಎಲ್ಲರಿಗೂ ಕೂಡ ಮುಂದಿನ ದಿನಗಳಲ್ಲಿ ತಮ್ಮ ಕಾರ್ಯಗಳಲ್ಲಿ ಯಶಸ್ಸು ಮತ್ತು ಸೌಭಾಗ್ಯ ಸಿದ್ಧಿಸಲೆಂದು ಆಶಿಸಿದರು
ಗ ಈ ಭಾಗದ ಜನರಿಗೆ ಭಕ್ತಿ ಮತ್ತು ನಂಬಿಕೆ ಮೈ ಗೂಡಿದೆ ಯಾವುದೇ ಪೂಜಾ ಕಾರ್ಯಗಳನ್ನು ಇಲ್ಲಿಯ ಜನರು ಅಂತರಂಗ ಶುದ್ದಿಯಿಂದ ಮಾಡುತ್ತಾರೆ ಇಂತಹ ಪೂಜಾ ಕಾರ್ಯಕ್ರಮಗಳಿಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ನೆರವು ಮತ್ತು ಅವಕಾಶಗಳನ್ನು ಸರ್ಕಾರದ ವತಿಯಿಂದ ನೀಡಬೇಕೆಂದು ಸರ್ಕಾರವನ್ನು ಅಗ್ರಹಿಸಿದರು

ಇದೇ ಸಂದರ್ಭದಲ್ಲಿ ಉಪಸ್ಥಿತರಿದಂತಹ ಯಜ್ಞಟ್ಟಿ ಗೌಡ್ರು ಮಾತನಾಡಿ ಧಾರ್ಮಿಕ ಇತಿಹಾಸ ಮತ್ತು ಪರಂಪರೆ ಇರುವಂತಹ ಈ ಪುಣ್ಯಭೂಮಿ ಇಡೀ ಮ್ಯಾಸಮಂಡಲಕ್ಕೆ ತಾಯಿ ಬೇರು ಇದ್ದಹಾಗೆ ಇಂತಹ ಮಹತ್ ಪೂಜಾ ಕಾರ್ಯದಲ್ಲಿ ಭಾಗಿಯಾದಂತ ಎಲ್ಲಾ ಸದ್ಭಕ್ತರಿಗೆ ಆಯಸ್ಸು ಆರೋಗ್ಯ ಮತ್ತು ಸಮೃದ್ಧಿ ಪ್ರಾಪ್ತಿಸಲಿ ಎಂದು ಆಶಿಸಿದರು
ಇದೇ ಸಂದರ್ಭದಲ್ಲಿ ನಲಗೇತನಟ್ಟಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದೊಡ್ಡ ಬೋರಣ್ಣ ಎಲ್ಐಸಿ ಓಬಣ್ಣ ಚನ್ನಬಸವನಟ್ಟಿ ನಾಗರಾಜು ಭೀಮಗೊಂಡನಹಳ್ಳಿ ಹನುಮಯ್ಯ ದೊರೆ ಬೈಯಣ್ಣ ಮಲ್ಲೂರಲ್ಲಿ ಬೈಯಣ್ಣ ಗ್ರಾಮ ಪಂಚಾಯಿತಿ ಸದಸ್ಯರುಗಳು ಮತ್ತಿತರು ಉಪಸ್ಥಿತರಿದ್ದರು

About The Author

Namma Challakere Local News
error: Content is protected !!