ಚಳ್ಳಕೆರೆ : ದಲಿತರ ಮೇಲಿನ ದೌರ್ಜನ್ಯ, ಬಹಿಷ್ಕಾರ, ಮಹಿಳೆಯರಿಗೆ ಆಗುತ್ತಿದ್ದ ಅನ್ಯಾಯ ಕೇಳುವವರಿಲ್ಲದ ದಿನಗಳಲ್ಲಿ ಶೋಷಿತರ ಪ್ರತಿನಿಧಿಯಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜನ್ಮ ತಾಳಿತು ಎಂದು ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಟಿ.ವಿಜಯ್ ಕುಮಾರ್ ಹೇಳಿದರು.
ಅವರು ತಾಲೂಕಿನ ಕೆಡಿ ಕೋಟೆ ಗ್ರಾಮದಲ್ಲಿ ದಲಿತ ಸಂಘರ್ಷ ಸಮಿತಿ ಗ್ರಾಮ ಶಾಖೆ ಉದ್ಘಾಟಿಸಿ ಮಾತನಾಡಿದರು, ದಲಿತರು ವಿದ್ಯಾವಂತರಾಗಿ ಕುಲಕಸುಬಿಗೆ ಅಂಟಿಕೊಳ್ಳದೆ ಕೃಷಿಯೇತರ ಚಟುವಟಿಕೆಗಳಲ್ಲಿ ದುಡಿದು ಸರಕಾರದ ಸಾಲ ಸೌಲಭ್ಯ ಬಳಸಿಕೊಂಡು ಹೆಚ್ಚು ದುಡಿಮೆ ಮಾಡಬೇಕು. ಮಕ್ಕಳ ಜೀವನ ಉತ್ತಮವಾಗಿರುವಂತೆ ನೋಡಿಕೊಳ್ಳಬೇಕು ಎಂದರು.

ಸಾಹಿತಿ ದ್ಯಾವರನಹಳ್ಳಿ ಆನಂದ್ ಉಪನ್ಯಾಸ ನೀಡಿ, ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಹಿಂದುಳಿದ ದಲಿತ ಸಮುದಾಯದವರು ಸರ್ಕಾರದ ಸೌಲಭ್ಯ ಪಡೆಯಲು ಶಿಕ್ಷಣ ಪಡೆದು ಜಾಗೃತರಾಗಬೇಕಾಗಿದೆ. ಈ ನಿಟ್ಟಿನಲ್ಲಿ ದಲಿತ ಸಮುದಾಯದವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಪ್ರಯತ್ನಿಸಬೇಕು. ನಿಮಗೆ ಏನಾದರೂ ಅನ್ಯಾಯವಾದರೆ ಡಿಎಸ್‍ಎಸ್ ಸಂಘಟನೆ ಸದಾ ನಿಮ್ಮೊಂದಿಗೆ ಇರಲಿದೆ ಎಂದು ಹೇಳಿದರು.

ತಹಶಿಲ್ದಾರ್ ರೇಹಾನ್ ಪಾಷ ಮಾತನಾಡಿ,
ಸರ್ಕಾರ ತಮಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳನ್ನು ಬಳಕೆ ಮಾಡಿಕೊಳ್ಳಲು ಶಿಕ್ಷಣ ಮತ್ತು ಸಂಘಟನೆ ಅವಶ್ಯವಾಗಿದೆ. ನಿಮ್ಮ ಮಕ್ಕಳ ಉತ್ತಮ ವ್ಯಾಸಂಗಕ್ಕೆ ಸರಕಾರದ ಮಟ್ಟದಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ, ಅವುಗಳನ್ನು ಸದ್ಬಳಕೆ ಮಾಡಿಕೊಳ್ಳುವುದರ ಮೂಲಕ ಎಲ್ಲರೂ ಶಿಕ್ಷಣವಂತರಾಗಬೇಕು ಎಂದರು.

ಉಪನ್ಯಾಸಕರಾಗಿ ವಕೀಲರಾದ ಪರಮೇಶಿ ಮೌರ್ಯ, ಮೋದೂರು ತೇಜ, ಹೊನ್ನೂರಸ್ವಾಮಿ, ಬಿಇಓ‌.ಸುರೇಶ್ ಮಾತನಾಡಿದರು.

ಇದೇ ಸಂಧರ್ಭದಲ್ಲಿ
ತಾಲೂಕು ಸಂಚಾಲಕ ವಿಜಯ ಕುಮಾರ್, ಸಂಘನ ಸಂಚಾಲಕರಾದ ಹೊನ್ನೂರಸ್ವಾಮಿ, ದೊಡ್ಡ ಉಳ್ಳಾರ್ತಿ ರಾಜಣ್ಣ, ನನ್ನಿವಾಳ ನಾಗರಾಜ್, ಪಾಲಕ್ಷ, ವೀರಭದ್ರಪ್ಪ , ನಲಗೇನಹಟ್ಟಿ ನಾಗರಾಜ್, ರವಿ, ಮಹಂತೇಶ್, ಶ್ರೀನಿವಾಸ್, ಹಾಗೂ
ನೂತನ ಗ್ರಾಮ ಶಾಖೆ ಸಂಚಾಲಕರಾದ ನಾಗರಾಜ್, ಖಜಾಂಚಿ ಮಂಜುನಾಥ್, ಓಬಳೇಶಪ್ಪ ರಂಗಪ್ಪ, ಸಂಘಟನ ಸಂಚಾಲಕರಾದ ಹೆಚ್.ಮಂಜಣ್ಣ, ‌ಮುನಿಯಪ್ಪ, ಹಟ್ಟಿಯ ಯಜಮಾನರಾದ ಹನುಮಂತಪ್ಪ,
ಶಿಕ್ಷಕರಾದ ಆರ್ ಮಂಜುನಾಥ್,
ಬಿಇಓ‌ ಕೆಎಸ್.ಸುರೇಶ್, ವೃತ್ತ ನಿರೀಕ್ಷ ಹನುಮಂತಪ್ಪ ಶಿರೆಹಳ್ಳಿ, ಪಿಎಸ್ಐ ಮಾರುತಿ,
ಇನ್ನು ಹಲವು ಪದಾಧಿಕಾರಿಗಳು, ಸಂಚಾಲಕರು ಗ್ರಾಮದ ಮುಖಂಡರು ಸಾರ್ವಜನಿಕರು ಹಾಜರಿದ್ದರು.

About The Author

Namma Challakere Local News
error: Content is protected !!