ಚಳ್ಳಕೆರೆ :
ಭದ್ರ ಮೆಲ್ದೆಡೆ ಯೋಜನೆಯನ್ನು ಪೂರ್ಣಗೊಳಿಸಲು ಹಾಗೂ ಬೆಳೆ ವಿಮೆ, ಬೆಳೆ ಪರಿಹಾರ , ಹಾಗೂ ರೈತರ ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ನೀಡುವಂತೆ ಒತ್ತಾಯಿಸಿ ತಹಶಿಲ್ದಾರ್ ಗೆ ಇಂದು ಕರ್ನಾಟಕ ರಾಜ್ಯ ರೈತ ಸಂಘ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಬಣವದರು ಮನವಿ ಸಲ್ಲಿಸಿದರು.
ಅವರು ತಾಲ್ಲೂಕು ಕಛೇರಿ ಮುಂದೆ ಪ್ರತಿಭಟನೆ ನಡೆಸಿ ನಂತರ ಮಾತನಾಡಿದ ಅವರು ಹಳ್ಳಿಗಳಲ್ಲಿ ಹಗಲು ಉರಿಯುತ್ತಿರುವ ಬೀದಿ ದೀಪ ಹಾರಿಸಿ, ಎರಡು ಗಂಟೆ ಹೆಚ್ಚಿಗೆ ರೈತರಿಗೆ ವಿದ್ಯುತ್ ನೀಡಿ, ಎಂದು ಒತ್ತಾಯಿಸಿದರು.
ಇದೇ ಸಂಧರ್ಭದಲ್ಲಿ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವರೆಡ್ಡಿ , ಮಲ್ಲಿಕಾರ್ಜುನ, ನಿಜಲಿಂಗಪ್ಪ, ಚಂದ್ರಶೇಖರ್, ತಿಪ್ಪೇಸ್ವಾಮಿ, ಅಶೋಕ ರೆಡ್ಡಿ, ರಂಗಾರೆಡ್ಡಿ, ಉಮೇಶ್, ಅಂಜಿನಪ್ಪ ಇತರರು ಇದ್ದರು.


