ಚಿತ್ರದುರ್ಗ: ಬೈಕ್ ಗಳ ನಡುವೆ ಡಿಕ್ಕಿ ಸವಾರ
ಪ್ರಾಣಾಪಾಯದಿಂದ ಪಾರು
ಚಿತ್ರದುರ್ಗ ನಗರದ ಕೇಂದ್ರ ಗ್ರಂಥಾಲಯದಿಂದ ಜೆಸಿಆರ್
ಗೆ ಹೋಗುವ ರಸ್ತೆ ಕಿಷ್ಕಂದೆಯಾಗಿದ್ದು, ವಾಹನ ಸಂಚಾರ
ದುಸ್ತರವಾಗಿದೆ. ಟೌನ್ ಕೋ ಆಪರೇಟಿವ್ ಬ್ಯಾಂಕ್ ಬಳಿ
ಅಡ್ಡಾದಿಡ್ಡಿ ಪಾರ್ಕಿಂಗ್ ಮತ್ತು ರಸ್ತೆಯ ಬದಿಯಲ್ಲಿರುವ ಹೊಟೇಲ್
ಗಳಿಂದಾಗಿ ಈ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ.
ನ.4ರಂದು ಬೈಕ್ ಗಳು ಡಿಕ್ಕಿ ಹೊಡೆದ ಪರಿಣಾಮ ಸಂಚಾರ
ಸಂಪೂರ್ಣ ಸ್ಥಗಿತಗೊಂಡಿತ್ತು. ಅನಾಹುತ ತಪ್ಪಿಸಲು ಸಂಚಾರಿ
ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು
ಆಗ್ರಹಿಸಿದ್ದಾರೆ.

