ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಂದ ವಿಶೇಷ ದಾಖಲಾತಿ ಆಂದೋಲನ ಪಟ್ಟಣದಲ್ಲಿ ಜಾಗೃತಿ ಜಾಥ್
ನಾಯಕನಹಟ್ಟಿ:: ಪಟ್ಟಣದ ಶಾಲೆ ವಿದ್ಯಾರ್ಥಿಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸೇರಿಸಿ ಸೇರಿಸಿ ಶಾಲೆಗೆ ಸೇರಿಸಿ ಎಂಬ ಘೋಷ ವಾಕ್ಯದೊಂದಿಗೆ ವಿಶೇಷ ದಾಖಲಾತಿ ಆಂದೋಲನ 2025 – 26 ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಯುಕ್ತ ಪಟ್ಟಣದಲ್ಲಿ ಜಾಗೃತಿ ಮೂಡಿಸಲಾಯಿತು .
ಇದೇ ಸಂದರ್ಭದಲ್ಲಿ ಶಿಕ್ಷಕ ಡಿ. ರಾಮಕೃಷ್ಣ ಮಾತನಾಡಿದರು. 2025 -26 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದರಿಂದ ನಾಲ್ಕನೇ ತರಗತಿವರೆಗೆ ಆಂಗ್ಲ ಮಾಧ್ಯಮದಲ್ಲಿ ತರಗತಿಗಳು ಆರಂಭವಾಗಿವೆ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ 5ನೇ ತರಗತಿ ಇಂಗ್ಲಿಷ್ ಆಂಗ್ಲ ಮಾಧ್ಯಮ ತರಗತಿಗಳು ಪ್ರಾರಂಭವಾಗಲಿದೆ ಹಾಗೆ ಒಂದರಿಂದ ಏಳನೇ ತರಗತಿವರೆಗೆ ಅತ್ಯುತ್ತಮವಾಗಿ ಬೋಧನೆಯನ್ನು ಮಾಡಲಾಗುತ್ತದೆ ದಯಮಾಡಿ ಸಾರ್ವಜನಿಕರು ತಮ್ಮ ಮಕ್ಕಳನ್ನು ಕನ್ನಡ ಮತ್ತು ಆಂಗ್ಲ ಮಾಧ್ಯಮ ಸರ್ಕಾರಿ ಮಾದರಿ ಶಾಲೆಗೆ ಸೇರಿಸಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಪ್ರಭಾರಿ ಮುಖ್ಯ ಶಿಕ್ಷಕಿ ಎನ್ ಸುಮಿತ್ರ, ಶಿಕ್ಷಕ ಎಂ.ವಿ. ಯತೀಶ್, ಡಿ ಕೃಷ್ಣಾರೆಡ್ಡಿ ಎಚ್. ಮಂಜುನಾಥ್, ಶಿಕ್ಷಕಿಯರಾದ ಜಿ.ಗಾಯತ್ರಿ ದೇವಿ, ಕೆ.ಎಲ್.ಉಷಾ, ಬಿ.ಕೆ. ಸುಮಾ,ಜಿ. ಪಿ. ಚಂದನ, ಸೇರಿದಂತೆ ವಿದ್ಯಾರ್ಥಿ – ವಿದ್ಯಾರ್ಥಿನಿಯರು ಇದ್ದರು.

