ನಾಯಕನಹಟ್ಟಿ ಹೋಬಳಿಯ ಐತಿಹಾಸಿಕ ಗುಹಂತಾರ ದೇವಾಲಯದ ಹೊಸಗುಡ್ಡ ಶ್ರೀ ರಾಮಲಿಂಗೇಶ್ವರ ದೇವಾಲಯದ ಟ್ರಸ್ಟಿನ ನೂತನ ಪದಾಧಿಕಾರಿಗಳ ಆಯ್ಕೆ ಭಾನುವಾರ ಮಧ್ಯಾಹ್ನ 1:30ಕ್ಕೆ ನಡೆಯಿತು.
ಟ್ರಸ್ಟ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಂಗಾರಪ್ಪ ಮಾತನಾಡಿ, ದೇವಸ್ಥಾನದ ಜೀರ್ಣೋದ್ದರಕ್ಕಾಗಿ ಟ್ರಸ್ಟ್ ಮಾಡಲಾಗಿದೆ,ಇನ್ನು ಮುಂದೆ ಯಾವುದೇ ಕಾರ್ಯಕ್ರಮಗಳು ನಡೆಯಲಿ ಟ್ರಸ್ಟ್ ಗಮನಕ್ಕೆ ತಂದು ಮದುವೆ ಇನ್ನಿತರ ಶುಭ ಸಮಾರಂಭಗಳು ನಡೆಸಬೇಕು,ಈ ಹೊಸಗುಡ್ಡದ ಕೋಟೆ ಐತಿಹಾಸಿಕ ಪುರಾತನವಾಗಿದ್ದು ಶಿಥಿಲಾವಸ್ತೆಗೆ ಕೋಟೆ ತಲುಪಿದೆ ಆದ್ದರಿಂದ ಪುರಾತತ್ವ ಇಲಾಖೆ ಕೋಟೆ ಸಂರಕ್ಷಣೆಗೆ ಮುಂದಾಗ ಬೇಕಿದೆ ಪ್ರವಾಸೋದ್ಯಮ ಇಲಾಖೆಯಿಂದ ಹೊಸಗುಡ್ಡ ಅಭಿವೃದ್ಧಿಗೆ ಅನುದಾನ ನೀಡಬೇಕು ಎಂದರು.
ಟ್ರಸ್ಟ್ ಉಪಾಧ್ಯಕ್ಷ ಪಿ. ಟಿ. ರುದ್ರಮುನಿ, ಕಾರ್ಯದರ್ಶಿ ಬಡಕಲ ಓಬಯ್ಯ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಸದಸ್ಯರಾದ ಪಿ ಚಂದ್ರಣ್ಣ, ಗೌಡ್ರು ಬಂಗಾರಯ್ಯ,ಟಿ ಚಿನ್ನಯ್ಯ, ಜಿ.ಕೆ. ಓಬಯ್ಯ, ಕೆ. ಬೊಮ್ಮಯ್ಯ, ಪೂಜಾರಿ ಬಸವರಾಜ್, ಪೂಜಾರಿ ಓಬಯ್ಯ ,ಎತ್ತಿನ ಓಬಯ್ಯ, ಪಿ ಬಿ ಬೋರಯ್ಯ, ಮಲ್ಲಿಕಾರ್ಜುನ್, ಗೋಪಾಲಸ್ವಾಮಿ, ವಿರೂಪಾಕ್ಷಿ, ಎ.ಓ. ವೆಂಕಟೇಶ್, ಚಿನ್ನಯ್ಯ, ಚಂದ್ರಣ್ಣ, ಪಾಲಯ್ಯ, ಇದ್ದರು

