filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (0.43253967, 0.47977686);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 36;

ಚಳ್ಳಕೆರೆ : ರೋಗಿಯ ಸೋಗಿನಲ್ಲಿ ಬಂದ ಚಾಲಾಕಿ ಕಳ್ಳ, ರೋಗಿಯ ಮಾಂಗಲ್ಯ ಸರಕದ್ದು ಪರಾರಿಯಾಗಿರುವಂತ ಘಟನೆ ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿದೆ.

ಹೌದು. ಚಳ್ಳಕೆರೆ ನಗರದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ರಕ್ತಪರೀಕ್ಷೆಗೆಂದು ಕ್ಯೂನಲ್ಲಿ ನಿಂತ ಮಹಿಳೆಯ ಕೊರಳನಲ್ಲಿ‌ ಇರುವಂತಹ ಮಾಂಗಲ್ಯ ಸರವನ್ನು ಚಾಲಾಕಿ ಕಳ್ಳ ಕಿತ್ತು ಕದ್ದೋಗಿದ್ದಾನೆ.

ನಾಯಕನಹಟ್ಟಿ ಮೂಲದ ಮಹಿಳೆ ತಮ್ಮ ಗಂಡನ ಜೊತೆ ಆಸ್ಪತ್ರೆಗೆಂದು ಬಂದು ರಕ್ತಪರೀಕ್ಷೆಗೆ ಸರಥಿ ಸಾಲಿನಲ್ಲಿ ನಿಂತಿದ್ದಳು ಇದನ್ನೆ ಗುರಿಯನ್ನಾಗಿಸಿಕೊಂಡ ಕಳ್ಳ ಜನದಟ್ಟಣೆಯ ಪ್ರದೇಶ ಕಂಡು ರೋಗಿಯ ಸೋಗಿ‌ನಲ್ಲಿ ಮಾಂಗಲ್ಯ ಸರ ಕದಿದ್ದಾನೆ.

ಈ ಪ್ರದೇಶದಲ್ಲಿ ಚಾಲಾಕಿ ಕಳ್ಳ ತಮ್ಮ ಕೈಚಳಕ ತೋರಿದ್ದಾನೆ ಇನ್ನು ಮಾಂಗಲ್ಯ ಸರ ಕಳೆದುಕೊಂಡ ನಾಯಕನಹಟ್ಟಿ ಮೂಲದ ಮಹಿಳೆ ದುಃಖ ತಪ್ತಳಾಗಿ ಇಡೀ ಆಸ್ಪತ್ರೆ ತುಂಬೆಲ್ಲ ಕಳ್ಳನಿಗಾಗಿ ಹುಡುಕಾಟ ನಡೆಸುವಂತ ದೃಶ್ಯ ಎಲ್ಲೆಡೆ ಕಂಡು ಬಂದಿತ್ತು

ಇನ್ನು ಜನದಟ್ಟಣೆ ಇರುವಂತಹ ಈ ಪ್ರದೇಶದಲ್ಲಿ ಇತ್ತಿಚೀಗೆ ಕಳ್ಳರು ಕೇವಲ ರೋಗಿಗಳ ಬೈಕ್ ಗಳನ್ನು ಕದಿಯುವಂತಹ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸರಿಯಾಗುತ್ತಿದ್ದವು ಆದರೆ ಎಚ್ಚೆತ್ತ ಪೊಲೀಸ್ ಇಲಾಖೆ ದಿನದ 24 ಗಂಟೆಯೂ ಆಸ್ಪತ್ರೆಯ ಸುತ್ತಲೂ ಪೊಲೀಸ್ ಸಿಬ್ಬಂದಿ ನೇಮಕ ಮಾಡಿರುವುದರಿಂದ ಚಾಲಾಕಿ ಕಳ್ಳರು ಆಸ್ಪತ್ರೆಯ ಒಳಗಡೆ ಜನದಟ್ಟಣೆ ಇರುವಂತಹ ಸ್ಥಳಗಳಲ್ಲಿ ರೋಗಿಯ ನೆಪದಲ್ಲಿ ಕ್ಯೂನಲ್ಲಿ ನಿಂತು ಮೊಬೈಲ್ , ರೋಗಿಗಳ ಪರ್ಸ್ , ಮಾಂಗಲ್ಯ ಸರ ಹೀಗೆ ಇತ್ಯಾದಿ ವಸ್ತುಗಳನ್ನು ಕಳ್ಳರು ಕದ್ದೊಯ್ಯುತ್ತಿದ್ದಾರೆ.

ಇನ್ನೂ ಜನದಟ್ಟಣೆಯ ಪ್ರದೇಶಗಳಲ್ಲಿ ಪೋಲಿಸ್ ಪಡೆ ಇರುವಂತೆ ನಾಗರೀಕರು ಮನವಿ ಮಾಡಿದ್ದಾರೆ.

About The Author

Namma Challakere Local News
error: Content is protected !!