ಚಳ್ಳಕೆರೆ : ಸ್ಥಳೀಯವಾಗಿ ವಾಸ ಮಾಡುವಂತ ನಮಗೆ ಅಗತ್ಯವಾಗಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಕೊಡಬೇಕಾಗಿ ಸ್ಥಳೀಯ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ, ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಕೊಡಬೇಕೆಂದು ತಾಲೂಕಿನ ದೊಡ್ಡ ಉಳ್ಳಾರ್ತಿ ಗ್ರಾಮ ಪಂಚಾಯಿತಿ ಅಧಿಕಾರಿಗೆ ಅವರಿಗೆ ಮಹಿಳೆಯರು ಮನವಿ ನೀಡಿ ಆಕ್ರೋಶ ಹೊರಹಾಕಿದ್ದಾರೆ

ಅವರು ತಾಲೂಕಿನ ದೊಡ್ಡ ಉಳ್ಳಾರ್ತಿ ಗ್ರಾಮದ ಹೊಸ ಬಡಾವಣೆಯಲ್ಲಿ ಅಂಗನವಾಡಿ ಸಮೀಪ ಇರುವ ಹಲವಾರು ಮನೆಗಳಿಗೆ ಸರಿಯಾದ ರಸ್ತೆ ಇಲ್ಲದೆ, ಇಲ್ಲಿನ ಜನರು ಶಾಲಾ ಮಕ್ಕಳು, ವಯೋವೃದ್ಧರು ಕಿರಿದಾದ ದಾರಿಯಲ್ಲಿ ವಾಹನಗಳು ಮುಂದಕ್ಕೆ ಹೊಗದೆ, ಈ ಜಾಗದಲ್ಲಿ ಅನಿವಾರ್ಯವಾಗಿ ಓಡಾಡಬೇಕಾಗಿದೆ ಆದ್ದರಿಂದ ಸ್ಥಳೀಯ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಒತ್ತುವರಿಯಾಗಿರುವಂತಹ ರಸ್ತೆಯನ್ನು ಅಗಲೀಕರಣ ಗೊಳಿಸಿ ಬೀದಿ ದೀಪದ ವ್ಯವಸ್ಥೆ ಮಾಡಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು ಒತ್ತಾಯಿಸಿದರು.

ಹೊಸ ಬಡಾವಣೆಯಲ್ಲಿ ಅಂಗನವಾಡಿಗೆ ಬರುವಂತಹ ಮಕ್ಕಳಿಗೆ ಸುರಕ್ಷಿತವಾದ ರಸ್ತೆಯನ್ನು ನಿರ್ಮಿಸಿ ಕೊಡಬೇಕು, ಅತೀ ತುರ್ತಾಗಿ ರಸ್ತೆ ಅಭಿವೃದ್ಧಿ ಪಡಿಸಬೇಕು ಎಂದು ಪೋಷಕರ ಆಗ್ರಹವಾಗಿದೆ.

About The Author

Namma Challakere Local News
error: Content is protected !!