ಚಳ್ಳಕೆರೆ :
ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಕೇವಲ ವೀರವನಿತೆಯರು ಅಲ್ಲದೆ ಲೇಖಕಿಯರು ಸಹ ತಮ್ಮ ಚಾಪು ಮೂಡಿಸಿದ್ದಾರೆ ಎನ್ನಲಾಗಿದೆ.
ಹೌದು ಜಿಲ್ಲೆಯಲ್ಲಿ ಮಹಿಳೆಯರೇ ಸೇರಿ ಕಥೆ ಕವನ, ಸಂಕಲನಗಳನ್ನು ಬಿಡುಗಡೆ ಮಾಡುವುದರ ಮೂಲಕ ಮೇಲುಗೈ ಸಾಧಿಸಿದ್ದಾರೆ.
ಅದರಂತೆ ಜಿಲ್ಲೆಯಲ್ಲಿ ಸಂಘ ಕೂಡ ಹುಟ್ಟು ಹಾಕಿ ಕವಯಿತ್ರಿಗಳ ಬೆಳವಣಿಗೆಗೆ ಕಾರಣರಾಗಿದ್ದಾರೆ.
ಅದರಂತೆ ಇಂದು ಸಂಘದ ಪೂರ್ವಭಾವಿ ಸಭೆ ನಗರದ ಪತ್ರಿಕಾ ಭವನದ ಅಂಬೇಡ್ಕರ್ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿರುವ ಕವಯಿತ್ರಿ ನಿರ್ಮಲ ಮರಡಿಹಳ್ಳಿ,ಉಪಾಧ್ಯಕ್ಷ ರಾಗಿ ಶಿಕ್ಷಕರು ಹಾಗೂ ಕವಯಿತ್ರಿಗಳಾದ ಶಬ್ರಿನಾ ಮಹಮದ್ ಅಲಿ,ಕಾರ್ಯದರ್ಶಿಯಾಗಿ ದೀಪಿಕಾ ಬಾಬು, ಉಪಕಾರ್ಯದರ್ಶಿಯಾಗಿ ಚಾಂದಿನಿ ಖಲೀದ್, ಖಜಾಂಚಿಯಾಗಿ ಮೀರಾ ಮೇಡಂ ಸಂಘದ ಸಂಘದ ಉದ್ದೇಶಗಳನ್ನು ತಿಳಿಸಿದರು.
ಇದೇ ಸಂಧರ್ಭದಲ್ಲಿ ಶಿಕ್ಷಕರಾದ
ವಿಜಯಲಕ್ಷ್ಮಿ, ದ್ಯಾಮಕ್ಕ, ವಿಜಯಕಲಾ,ಸೌಮ್ಯ ಬಾನಾಡಿ, ಮಧು ಸಜ್ಜನ್, ಶೃತಿ ಎಸ್. ಹೆಗಡೆ, ಶಾಂತಾ.ಜಿ, ಶಿಲ್ಪ, ಭವ್ಯ ರಾಮಚಂದ್ರ, ಶೈಲಜಾ ಮತ್ತಿತರರ ಲೇಖಕಿಯರು ಭಾವಗಹಿಸಿ ಸಭೆಯನ್ನು ಯಶಸ್ವಿಗೊಳಿಸದರು.

