ಚಳ್ಳಕೆರೆ : ಜಾತಿಗೆ ಅನುಗುಣವಾಗಿ ಒಳಮೀಸಲಾತಿ ವಿಂಗಡನೆ ಮಾಡಿದ
ನ್ಯಾ.ನಾಗಮೊಹನ್ ದಾಸ್ ನೀಡಿದ ವರದಿ ಸರಿಯಷ್ಟೆ ಆದರೆ ಸರಕಾರ ಮಂಡಿಸಿದ ವರದಿ ಅಪಯಾಕಾರಿ ಎಂದು ನಿವೃತ್ತ ತಹಶಿಲ್ದಾರ್ ಎಂ.ಮಲ್ಲಿಕಾರ್ಜುನ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ.
ಅವರು ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ ಅವರು ಶೇ. 17 ರಷ್ಟು ಇದ್ದ ಮೀಸಲಾತಿ ಜಾತಿವಾರು ವಿಂಗಡನೆ ಮಾಡಿದ ಆಯೋಗ ಸೂಕ್ತ ನಿಲುವು ನೀಡಿದ್ದರು, ಆದರೆ ಅದನ್ನು ಅನುಸರಿಸಬೇಕಾದ ಸರಕಾರ ಸರಿಯಾದ ರೀತಿಯಲ್ಲಿ ಜಾತಿವಾರು ಹಂಚಿಕೆ ಮಾಡಿಲ್ಲ ಎಂದು ಸರಕಾರದ ವಿರುದ್ಧ ಆರೋಪಿಸಿದರು.
ಇದೇ ಸಂಧರ್ಭದಲ್ಲಿ ಪ್ರೋ.ಸಿಕೆ.ಮಹೇಶ್ವರಪ್ಪ, ಕೆ.ಕುಮಾರ್, ಸಿಎ.ಚಿಕ್ಕಣ್ಣ,
ಸಿಪಿ.ಯೋಗೇಶ್ ಇತರರು ಇದ್ದರು.

