ಚಳ್ಳಕೆರೆ :
ಚಿತ್ರದುರ್ಗ: ಸಿಹಿ ತಿಂದು ಸಂಭ್ರಮಿಸಿದ ಬಿಜೆಪಿ
ಕಾರ್ಯಕರ್ತರು
ಚಿತ್ರದುರ್ಗ: ಕೇಂದ್ರ ಸರ್ಕಾರ ಜಿಎಸ್ಟಿ ದರದಲ್ಲಿ
ಕಡಿತಗೊಳಿಸಿರುವುದನ್ನು ಸ್ವಾಗತಿಸಿ ಭಾರತೀಯ ಜನತಾ ಪಾರ್ಟಿ
ವತಿಯಿಂದ ಇಂದು ಗಾಂಧಿ ವೃತ್ತದಲ್ಲಿ ಪಕ್ಷದ ಪದಾಧಿಕಾರಿಗಳು,
ಮುಖಂಡರು, ಕಾರ್ಯಕರ್ತರು ಸಿಹಿ ಹಂಚಿ ಪಟಾಕಿ ಸಿಡಿಸಿ
ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ
ಜಿಲ್ಲಾಧ್ಯಕ್ಷ ಕೆಟಿ ತಿಪ್ಪೇಸ್ವಾಮಿ, ಜಿಎಸ್ಟಿ ಸುಧಾರಣೆ ಕ್ರಮ ಆತ್ಮ
ನಿರ್ಭರ ಭಾರತ ನಿರ್ಮಾಣದ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆ. ಜಿಎಸ್
ಟಿ ಸುಧಾರಣೆ ಉಳಿತಾಯ ಉತ್ಸವವಾಗಿದ್ದು, ಇದರಿಂದ ದೇಶದ
ಪ್ರಗತಿಗೆ ವೇಗ ಸಿಗಲಿದೆ ಎಂದು ತಿಳಿಸಿದರು.

