ಬಿಜೆಪಿ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ : ನೇರಲಗುಂಟೆ ತಿಪ್ಪೇಸ್ವಾಮಿ.
ನಾಯಕನಹಟ್ಟಿ : ಬಿಜೆಪಿ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಹಿಂದೆ ಮದಕರಿ ನಾಯಕ ಆಳ್ವಿಕೆ ನಡೆಸಿದ ಜಿಲ್ಲೆ ಇದು ನಾಯಕ ಜನಾಂಗಕ್ಕೆ ಬಿಜೆಪಿ ಪಕ್ಷದಲ್ಲಿ ಪ್ರಾತಿನಿಧ್ಯವಿಲ್ಲ ಎಂದು ಮಾಜಿ ಶಾಸಕ ನೇರಲಗುಂಟೆ ತಿಪ್ಪೇಸ್ವಾಮಿ ಆರೋಪಿಸಿದರು.
ನಂತರ ಮಾತನಾಡಿದ ಅವರು ಬಿಜೆಪಿ ಪಕ್ಷದಲ್ಲಿ ಕೋರ್ ಕಮಿಟಿಯನ್ನು ಮಾಡುತ್ತಾರೆ. ಕೋರ್ ತೀರ್ಮಾನವೇ ಬೇರೆ, ಪಕ್ಷದ ನಾಯಕರ ತೀರ್ಮಾನವೇ ಬೇರೆ. ಮಂಡಲ ಅಧ್ಯಕ್ಷರ ಆಯ್ಕೆಯಲ್ಲಿ ಜಿಲ್ಲೆಯಲ್ಲಿ ನಾಯಕ ಜನಾಂಗಕ್ಕೆ ಒಂದು ಅಭ್ಯರ್ಥಿ ಕೂಡ ನೀಡಿಲ್ಲ. ಕೆಲವರು ಹೇಳುತ್ತಾರೆ ಚಳ್ಳಕೆರೆ, ಮೊಳಕಾಲ್ಮೂರು ಎಸ್ ಟಿ ಕ್ಷೇತ್ರಗಳಿಗೆ ಎಂದು. ಕಳೆದ ಬಾರಿ ಚಿತ್ರದುರ್ಗ ಜಿಲ್ಲೆಯ ಎಂಪಿ ಕ್ಷೇತ್ರ ನೀಡಿದ್ದರು. ಈ ಬಾರಿಯೂ ನೀಡಿದ್ದಾರೆ, ಆದರೆ ನಮ್ಮ ಅಭ್ಯಂತರವೇನಿಲ್ಲ. ನಮ್ಮ ನಾಯಕ ಜನಾಂಗಕ್ಕೆ ಸ್ಥಾನಮಾನ ನೀಡಿಲ್ಲ. ನಾವೇಕೆ ಬಿಜೆಪಿ ಪಕ್ಷಕ್ಕೆ ಸಹಕಾರ ನೀಡಬೇಕು? ಅದರಲ್ಲಿ ನಾನು ಈ ಭಾಗದ ಹಿರಿಯ ಮಾಜಿ ಶಾಸಕನಿದ್ದೇನೆ. ನಮ್ಮ ಗಮನಕ್ಕೆ ತರುವುದು ಬೇಡವೇ? ನಾನು ಎಲ್ಲ ಜನಾಂಗದ ಮುಖಂಡರ ಜೊತೆ ಚರ್ಚಿಸಿ ಒಂದು ತೀರ್ಮಾನಕ್ಕೆ ಬರುತ್ತಿದ್ದೆವು. ಆ ಸೌಜನ್ಯ ಕೂಡ ಬಿಜೆಪಿ ಜಿಲ್ಲಾ ಹಾಗೂ ಸ್ಥಳೀಯ ಮುಖಂಡರುಗಳಲ್ಲಿ ಮಾಡಲಿಲ್ಲ. ನಮ್ಮ ನಾಯಕ ಜನಾಂಗವನ್ನು ಬಿಜೆಪಿ ಪಕ್ಷ ಕೇವಲ ವೋಟ್ ಹಾಕಲಿಕ್ಕೆ ಮೀಸಲಿಟ್ಟಿದ್ದಾರೆ. ಆದ್ದರಿಂದ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನ ಕಾಲಿ ಇದೆ ಅದನ್ನು ನಮ್ಮ ನಾಯಕ ಜನಾಂಗದವರಿಗೆ ನೀಡಬೇಕೆಂದು ಆಗ್ರಹಿಸಿದರು.
ನಂತರ ಈ ಭಾಗದ ಶಾಸಕರು ಕಾಮಗಾರಿಗಳಲ್ಲಿ ಗುತ್ತಿಗೆದಾರರಿಂದ ಅರ್ಧಭಾಗ ಪಡೆಯುತ್ತಿದ್ದಾರಂತೆ! ಮೊಳಕಾಮೂರು ತಾಲೂಕಿನಲ್ಲಿ ಮರಳು ದಂದೆ ನಡೆಸುತ್ತಿದ್ದಾರೆ ಅಂತೆ! ನಾನು ಕಾಂಗ್ರೆಸ್ ನಲ್ಲಿದ್ದಾಗ ಪಟ್ಟಣ ಪಂಚಾಯತಿ ಚುನಾವಣೆ ಗೆಲ್ಲಿಸಿದ್ದು. ಒಬ್ಬರಿಗಾದರೂ ನಾಯಕ ಜನಾಂಗಕ್ಕೆ ಉಪಾಧ್ಯಕ್ಷ ಸ್ಥಾನ ನೀಡಬಹುದಿತ್ತಲ್ಲ. ಮನಸ್ಸು ಬರಲಿಲ್ಲವೇ? ನಮ್ಮ ನಾಯಕರಿಗೆ ನೀಡಲು ಇಷ್ಟ ಬರುವುದಿಲ್ಲವೇ? ಬೇರೆಯವರಿಗೆ ನೀಡುತ್ತೀರಾ. ಈಗಾಗಲೇ ಕಾಂಗ್ರೆಸ್ ನಲ್ಲಿ ಬಿಜಿಕೆರೆ ಒಂದು ಬಾಣ ಹಾಗೂ ರಾಂಪುರ ಒಂದು ಬಣಗಳಾಗಿವೆ ಕ್ಷೇತ್ರವನ್ನು ಹಿಡಿತದಲ್ಲಿ ಇಟ್ಟುಕೊಂಡಿದ್ದೀರಾ? ಏತಕ್ಕೆ ಶಾಸಕರಾಗಬೇಕು? ಶಾಸಕರಾದವರು ಜನಸೇವೆ ಮಾಡಬೇಕು. ಸಾರ್ವಜನಿಕರು ನಿಮ್ಮ ಮನೆ ಹತ್ತಿರ ಬಂದರೆ ಜವಾನರಾಗಿ ನಿಲ್ಲಬೇಕೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.

