ಚಿತ್ರದುರ್ಗ: ನಿವೇಶನಕ್ಕಾಗಿ ಆಗ್ರಹಿಸಿ ಪ್ರತಿಭಟನೆ
ಚಿತ್ರದುರ್ಗದಲ್ಲಿಂದು, ನಿವೇಶನ ರಹಿತ ಕುಟುಂಬಗಳಿಗೆ
ಸರ್ಕಾರಿ ಭೂಮಿ ಗುರುತಿಸಿ, ವಾಜಪೇಯಿ ನಗರ ನಿವೇಶನ
ಯೋಜನೆಯಡಿಯಲ್ಲಿ ನಿವೇಶನ ಮಂಜೂರಾತಿ ನೀಡಬೇಕೆಂದು
ಆಗ್ರಹಿಸಿ ಸ್ಲಂ ಜನರ ಸಂಘಟನೆಯಿಂದ ಪ್ರತಿಭಟನೆ
ನಡೆಸಲಾಯಿತು. ಚಿತ್ರದುರ್ಗದ ಪ್ರವಾಸಿ ಮಂದಿರದಿಂದ
ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆ ನಡೆಸಿದ ಸಂಘಟನೆಯು,
ನಗರದ ವಿವಿಧ ಕೊಳಚೆ ಪ್ರದೇಶಗಳಲ್ಲಿ ವಾಸಿಸುವ ಬಡವರಿಗೆ
ಕೂಡಲೇ ಭೂಮಿ ಮಂಜೂರು ಮಾಡುವಂತೆ ಒತ್ತಾಯಿಸಿದೆ.

About The Author

Namma Challakere Local News
error: Content is protected !!