ಶಿಕ್ಷಕರ ಮಾರ್ಗದರ್ಶನ ನಿಮಗೆಲ್ಲ ದಾರಿದೀಪವಾಗಿದೆ. ಇಂತಹ ಶಿಕ್ಷಕರನ್ನು ಪಡೆದಂತಹ ನೀವೆಲ್ಲರೂ ಧನ್ಯರು ನಿಮ್ಮೆಲ್ಲರ ಸೇವೆ ಎಂದೆಂದಿಗೂ ಈಗೆ ಇರಲಿ ಎಂದು ಬಿಇಓ ಕೆ ಎಸ್ ಸುರೇಶ್ ಹೇಳಿದರು…
ನಾಯಕನಹಟ್ಟಿ:: ಹೋಬಳಿಯ ಮನುಮೈನಹಟ್ಟಿಯ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಶಾಲೆಯ ಹಳೆ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರು ವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು. ಗುರುಗಳು ಮಕ್ಕಳನ್ನು ತಿದ್ದಿ ತಿಡುವಲ್ಲಿ ತುಂಬಾ ಪ್ರಯತ್ನ ಮಾಡುತ್ತಾರೆ ಕಲ್ಲನ್ನ ಶಿಲಿಯನ್ನಾಗಿ ಮಾಡುವ ಶಿಲ್ಪಿ ಮಕ್ಕಳನ್ನು ತಿದ್ದಿ ವಿದ್ವಂತರನ್ನಾಗಿ ಮಾಡುವ ಗುರುಗಳು ಎಂದಿಗೂ ಮರೆಯುವಂತಿಲ್ಲ. ಇಂತಹ ಗುರು ಶಿಷ್ಯರ ಪರಂಪರೆ ಹೀಗೆ ಮುಂದುವರೆಯಲಿ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವಲ್ಲಿ ಗುರುಗಳ ಮಾರ್ಗದರ್ಶನ ಮುಖ್ಯವಾಗುತ್ತದೆ. ಗುರುಗಳ ಮಾರ್ಗದರ್ಶನದಿಂದ ಎಂತಹ ಕಷ್ಟಗಳು ಬಂದರೂ ಬಗೆಹರಿಸಿಕೊಳ್ಳಬಹುದು ಹಾಗೂ ಅಂದುಕೊಂಡಂತಹ ಗುರಿಯನ್ನು ಮುಟ್ಟಬಹುದು. ಇಂತಹ ಆದರ್ಶ ಗುಣಗಳನ್ನು ಪ್ರತಿಯೊಬ್ಬರು ಬಹಳ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶಿಕ್ಷಣ ಎನ್ನುವುದು ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಶಿಕ್ಷಣದಿಂದ ಒಬ್ಬ ವ್ಯಕ್ತಿ ಏನನ್ನಾದರೂ ಸಾಧನೆ ಮಾಡಬಹುದು. ಸಾಧನೆಗೆ ಮೂಲ ಶಿಕ್ಷಣವಾಗಿದೆ. ಇಂತಹ ಶಿಕ್ಷಣವನ್ನು ಇಲ್ಲಿನ ಗುರುಗಳು ನಿಷ್ಠೆಯಿಂದ ನೀಡಿದ್ದಾರೆ. ಇಂದು ಕಾರ್ಯಕ್ರಮ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಯಾವುದೇ ಹಬ್ಬವಾದರೂ ಒಂದು ಮನೆತನಕ್ಕೆ ಸೀಮಿತವಾಗಿರುತ್ತದೆ ಆದರೆ ಗುರು ಸ್ನೇಹ ಸಮ್ಮೇಳನ ಈ ಊರೇ ಸಂಭ್ರಮಿಸಿದೆ .ಈ ಕಾರ್ಯಕ್ರಮದಲ್ಲಿ ಭಾಗವಹಿಸಿದೆ ಎಂದರೆ ಇಲ್ಲಿನ ಶಿಕ್ಷಕರ ಅದ್ಭುತವಾದ ಸೇವೆ ಇದಕ್ಕೆ ಕಾರಣ. ನಿನ್ನ ಹಳೆಯ ವಿದ್ಯಾರ್ಥಿಗಳು ಎಲ್ಲಾ ಶಿಕ್ಷಕರನ್ನ ಕಣ್ತುಂಬಿಕೊಂಡು ಪಾದವನ್ನು ಸ್ಪರ್ಶಿಸಿ ಆಶೀರ್ವಾದವನ್ನು ಪಡೆದಿದ್ದಾರೆ. ಇನ್ನೂ ತಮ್ಮ ಜೀವನವನ್ನು ಅತಿ ಎತ್ತರಕ್ಕೆ ಕೊಂಡೊಯ್ಯುವ ಸಂಕಲ್ಪ ಮಾಡಿದ್ದಾರೆ. ಈ ಗುರುವಂದನ ಕಾರ್ಯಕ್ರಮ ಇಂದು ಈ ಗ್ರಾಮಕ್ಕೆ ನಿಜವಾದ ಯುಗಾದಿ ಹಬ್ಬವಾಗಿದೆ ಇಂತಹ ಉತ್ತಮ ಕಾರ್ಯಕ್ರಮನ ರೂಪಿಸಿ ಎಲ್ಲರಿಗೂ ಗುರುದರ್ಶನ ಮಾಡಿದಂತಹ ಪ್ರತಿಯೊಬ್ಬರಿಗೂ ಶುಭವಾಗಲಿ ಎಂದರು…
ನಿವೃತ್ತ ಶಿಕ್ಷಕ ಜಿಟಿ ಸತ್ಯನಾರಾಯಣ ರೆಡ್ಡಿ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುತ್ತಾರೆ ಅವರು ಉತ್ತಮ ಪ್ರಜೆಯಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ. ಇಂತಹ ಶಿಕ್ಷಣವನ್ನು ನೀಡುವಲ್ಲಿ ನಮ್ಮ ಎಲ್ಲಾ ಶಿಕ್ಷಕರು ಸಹ ಸಾಕಷ್ಟು ಶ್ರಮವಹಿಸಿದ್ದಾರೆ. ನಮ್ಮ ಕೈಲಿ ವಿದ್ಯಾಭ್ಯಾಸ ಮಾಡಿದಂತಹ ಅನೇಕರು ಹಲವು ಹುದ್ದೆಗಳನ್ನು ಅಲಂಕರಿಸಿ ರಾಜ್ಯದ ವಿವಿಧ ಕಡೆ ಸೇವೆ ಸಲ್ಲಿಸುತ್ತಿದ್ದಾರೆ. ಇಂದು ನಮ್ಮನ್ನೆಲ್ಲ ಒಂದು ಕಡೆ ಕೂರಿಸಿ ಗುರುವಂದನ ಕಾರ್ಯಕ್ರಮ ಮಾಡಿರುವುದು ನಿಜವಾಗಲೂ ಅದ್ಭುತವಾದ ಕೆಲಸ ಎಂದರು..
ಶಾಲೆಯ ಹಳೆ ವಿದ್ಯಾರ್ಥಿ ಹಾಗೂ ವೃತ ನಿರೀಕ್ಷಕರಾದ ಜಿಬಿ .ಉಮೇಶ್ ಕುದಾಪುರ ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡಿಯಬೇಕು ಬುದ್ಧ ಬಸವ ಡಾ. ಬಿಆರ್ ಅಂಬೇಡ್ಕರ್ ಹಾಗೂ ಬಾಬು ಜಗಜೀವನ ಆದರ್ಶಗಳನ್ನ ಮೈಗೂಡಿಸಿಕೊಳ್ಳಬೇಕು ಇವರ ಆದರ್ಶಗಳನ್ನ ಪಾಲಿಸಿಕೊಂಡು ಸಮಾಜದಲ್ಲಿ ಉತ್ತಮ ಪ್ರಚಗಳಾಗಿ ಜೀವನ ಸಾಗಿಸಬೇಕು ಎಂದರು.
ಈ ಗುರು ವಂದನ ಕಾರ್ಯಕ್ರಮದಲ್ಲಿ ಶಿಕ್ಷಕರಾದ ರಾಮಣ್ಣ, ವೆಂಕಟಶಿವಾರೆಡ್ಡಿ. ಉಮಾ ಕಾಂತ್ ಹೆಗಡೆ. ಪಂಚಾಕ್ಷರಯ್ಯ, ಗಂಗಾಧರಪ್ಪ, ಜಿಟಿ ಸ್ವಾಮಿ ಸಿ ಬಿ.ಉಮೇಶ್, ನಾಗರಾಜು ಮಹಾಂತೇಶ್, ಕೆ ಅರುಂಧತಿ ಶಾಲೆಯ ಮುಖ್ಯ ಶಿಕ್ಷಕರದ ವಿಜಯಕುಮಾರ್ ಶಿಕ್ಷಕಿಯರಾದ ವಿಜಯ ಲಕ್ಷ್ಮಿ, ಉಮಾದೇವಿ ,ಗೀತಾ,
ಸಲೀಂ, ಹಳೆ ವಿದ್ಯಾರ್ಥಿಗಳು ಗ್ರಾಮಸ್ಥರು ಹಾಗೂ ನಿವೃತ ಶಿಕ್ಷಕರು ಇದ್ದರು.