“ಶ್ರೀರಾಮನ ಆದರ್ಶಮಯ ಜೀವನ ನಮಗೆ ಪ್ರೇರಣಾದಾಯಕ”- ಶ್ರೀಮತಿ ಯಶೋಧಾ ಪ್ರಕಾಶ್ ಅನಿಸಿಕೆ.
ಚಳ್ಳಕೆರೆ-ಶ್ರೀರಾಮನು ನಡೆಸಿದ ಆದರ್ಶಮಯ ಜೀವನ ನಮಗೆ ಪ್ರೇರಣಾದಾಯಕವಾಗಿದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಜಿ.ಯಶೋಧಾ ಪ್ರಕಾಶ್ ಅಭಿಪ್ರಾಯಪಟ್ಟರು. ಶಿವನಗರದ ತಮ್ಮ ಜಿ.ವಿ.ಎಸ್ ನಿವಾಸದಲ್ಲಿ “ಶ್ರೀರಾಮನವಮಿ”ಯ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಶ್ರೀರಾಮನ ಗುಣ ವಿಶೇಷಗಳ ಬಗ್ಗೆ ಮಾತನಾಡಿದರು. ಶ್ರೀರಾಮನ ಹದಿನಾರು ವಿಶೇಷ ಗುಣಗಳು ಅವನ ವ್ಯಕ್ತಿತ್ವದ ಆದರ್ಶವನ್ನು ಎತ್ತಿ ತೋರಿಸುತ್ತವೆ. ಇಂದಿನ ಸಮಾಜದಲ್ಲಿ ಶ್ರೀರಾಮನ “ರಾಮರಾಜ್ಯ” ನಿರ್ಮಾಣವಾಗಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀದೇವಿ ಸ್ತುತಿ ಪಠಣ,ಭಜನೆ ಮತ್ತು ‘ಶ್ರೀಶಾರದಾದೇವಿ ಜೀವನಗಂಗಾ’ ಗ್ರಂಥ ಪಾರಾಯಣ ಕಾರ್ಯಕ್ರಮ ನಡೆಯಿತು.ಈ ಸತ್ಸಂಗ ಸಭೆಯಲ್ಲಿ ಸದ್ಭಕ್ತರಾದ ಶ್ರೀಮತಿ ನಾಗರತ್ನಮ್ಮ,ರಶ್ಮಿ ರಮೇಶ್, ಯತೀಶ್ ಎಂ ಸಿದ್ದಾಪುರ, ಜ್ಯೋತಿಕ, ರಶ್ಮಿ ವಸಂತ, ಸೌಮ್ಯ, ಭ್ರಮರಂಭಾ, ಜಯಮ್ಮ,ಶೈಲಜ, ಕೃಷ್ಣವೇಣಿ, ಉಪಸ್ಥಿತರಿದ್ದರು.