ಚಳ್ಳಕೆರೆ :
ಅಧಿಕಾರ ಮತ್ತು ಐಶ್ವರ್ಯದಿಂದ ಗಳಿಸಲಾಗದ ಕೀರ್ತಿಯನ್ನು ಸೇವೆ, ತ್ಯಾಗದಿಂದ ಸಂಪಾದಿಸಬಹುದು ಎನ್ನುವ ಸಂದೇಶ ಸಾರಿದ ಹೆಗ್ಗಳಿಕೆ ಡಾ.ಬಾಬು ಜಗಜೀವನರಾಂ ಅವರಿಗೆ ಸಲ್ಲುತ್ತದೆ’ ಎಂದು ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಮಂಜುಳ ಶ್ರೀಕಾಂತ ಹೇಳಿದರು.
ಶನಿವಾರ ಪಟ್ಟಣದ ಶಿಕ್ಷಕ ಎನ್ ಮಹಾಂತೇಶ್ ವರ ನಿವಾಸದಲ್ಲಿ ಡಾಕ್ಟರ್ ಬಾಬು ಜಗಜೀವನ್ ರಾವ್ ರವರ 118 ನೇ ಜನ್ಮದಿನದ ಪ್ರಯುಕ್ತ ಪಿ ಹೆಚ್ ಡಿ ಪದವೀಧರರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ
ಸಮಾಜ ಸುಧಾರಣೆ ಹಾಗೂ ಎಲ್ಲರೂ ಸಮಾನವಾಗಿ ಜೀವನ ನಡೆಸಬೇಕು ಎನ್ನುವ ಮಹತ್ವಾಕಾಂಕ್ಷೆಯನ್ನು ಬಾಬು ಜಗಜೀವನರಾವ್ ಹೊಂದಿದ್ದರು. ಕಾರ್ಮಿಕರ ಏಳಿಗೆಯನ್ನು ಸದಾ ಬಯಸುತ್ತಿದ್ದರು. ದೇಶದ ಜನರು ಅಹಾರ ಕೊರತೆ ಅನುಭವಿಸುತ್ತಿರುವುದನ್ನು ಕಂಡು ಹಸಿರು ಕ್ರಾಂತಿ ಪ್ರಾರಂಭಿಸಿ ನೆರವಾದರು’ ಎಂದು ತಿಳಿಸಿದರು..
ಈ ಸಮಯದಲ್ಲಿ ಪಿಎಚ್ ಡಿ ಡಾಕ್ಟರೇಟ್ ಪದವಿಧರರಾದ ಕೊಡ್ಲಿಗಿ ತಾಲ್ಲೂಕಿನ ಕೆಂಚಮಲ್ಲನಹಳ್ಳಿ ಡಾ.ವೈ.ಫಕೀರಪ್ಪ,,
ಕೊಡ್ಲಿಗಿ ತಾಲ್ಲೂಕಿನ ತಾಯಕನಹಳ್ಳಿ ಡಾ.ಎಸ್.ಜಿ.
ನಾಗೇಶ್,ನಾಯಕನಹಟ್ಟಿ ಡಾ.ವಿ.ಧನಂಜಯ ಇವರನ್ನು ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಶಿಕ್ಷಕ ಎನ್ ಮಹಾಂತೇಶ ಮಾಜಿ ಗ್ರಾ.ಪಂ. ಸದಸ್ಯ ಆರ್. ಶ್ರೀಕಾಂತ್, ಪತ್ರಕರ್ತರಾದ ಮಾರುತಿ ಇದ್ದರು..